Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೀತಿ ಸಂಹಿತೆ ಜಾರಿ ಆದಾಗಿನಿಂದ ಎಷ್ಟು ಬಂಗಾರ ಸೀಜ್ ಮಾಡಿದನ್ನು ಕೇಳಿದ್ರೆ ಅವಕ್ ಆಗುತ್ತೀರ.!

 

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಈ ನಡುವೆ ರಾಜ್ಯಾದ್ಯಂತ ಅಕ್ರಮಗಳ ಮೇಲೆ ನಿಗಾ ವಹಿಸಿರುವ ತನಿಖಾ ತಂಡಗಳು ಈವರೆಗೆ ಬರೋಬ್ಬರಿ 48.66 ಕೋಟಿ ರು. ನಗದು ಸೇರಿದಂತೆ ಒಟ್ಟು 355.78 ಕೋಟಿರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿವೆ.

ರಾಜ್ಯಾದ್ಯಂತ ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿಕಾರಿಗಳು ಈವರೆಗೆ 142.32 ಲಕ್ಷ ಲೀಟರ್ ಮದ್ಯ, 10.22 ಕೋಟಿ ರು. ಮೌಲ್ಯದ 450.83 ಕೆ.ಜಿ. ತೂಕದ ಮಾದಕ ವಸ್ತು, 56.86 ಕೋಟಿ ರು. ಮೌಲ್ಯದ 107.40 ಕೆ.ಜಿ. ಚಿನ್ನಾಭರಣ, 1.13 ಕೋಟಿ ರು. ಮೌಲ್ಯದ 296.79 ಕೆ.ಜಿ. ಬೆಳ್ಳಿ ವಸ್ತುಗಳು, 9 ಲಕ್ಷ ರು. ಮೌಲ್ಯದ ವಜ್ರ, 7.74 ಕೋಟಿ ರು. ಮೌಲ್ಯದ ಉಚಿತ ಉಡುಗೊರೆಗಳು ಸೇರಿದಂತೆ

ಒಟ್ಟು 355.78 ಕೋಟಿ ರು. ಮೌಲ್ಯದವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕ್ಷಿಪ್ರ ಪಡೆಗಳು, ಸ್ಥಿರ ಕಣ್ಣಾವಲು ತಂಡಗಳು, ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹಗಳು ಮತ್ತು ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿದ ಸಂಬಂಧ ಈವರೆಗೆ 1,707 ಎಫ್ ಐಆರ್ ದಾಖಲಿಸಲಾಗಿದೆ. ಅಬಕಾರಿ ಇಲಾಖೆ 2,200 ಅಪರಾಧ ಪ್ರಕರಣಗಳು, ಪರವಾನಗಿ ಉಲ್ಲಂಘನೆ ಆರೋಪದಡಿ 2,828 ಪ್ರಕರಣಗಳು, ಎನ್‌ಡಿಪಿಎಸ್ ಅಡಿ 125 ಪ್ರಕರಣಗಳು ಮತ್ತು ಕರ್ನಾಟಕ ಅಬಕಾರಿ ಕಾಯ್ದೆಯಡಿ 15,013 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಾಹಿತಿ ನೀಡಿದೆ.