Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೀರಾವರಿ ಸೌಲಭ್ಯಕ್ಕೆ ಕೃಷಿ ಭಾಗ್ಯ ಯೋಜನೆ ಜಾರಿ.! 90% ವರೆಗೆ ಸಬ್ಸಿಡಿ

ರಾಜ್ಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷವಾದ ಅನುದಾನ ಮೀಸಲಿಟ್ಟ ರಾಜ್ಯ ಸರ್ಕಾರ, ಇದೀಗ ಮಳೆಯಾಶ್ರಿತ ರೈತರ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ.

ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ 6 ಪ್ರಮುಖ ಘಟಕಗಳ ಮೂಲಕ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಸರ್ಕಾರ ನಿರ್ಧರವನ್ನು ಮಾಡಿದೆ. ಕೃಷಿ ಭಾಗ್ಯ ಯೋಜನೆಯಡಿ ಈ 6 ಪ್ರಮುಖ ಸೌಲಭ್ಯಗಳನ್ನು ರೈತರಿಗೆ ಒದಗಿಸಿಕೊಡಲಾಗುವುದು.

  • ಕ್ಷೇತ್ರ ಬದು ನಿರ್ಮಾಣ ಮಾಡಿಕೊಡುವುದು.
  • ಕೃಷಿ ಹೊಂಡ ನಿರ್ಮಾಣ.
  • ನೀರು ಇಂಗದಂತೆ ಕೃಷಿ ಹೊಂಡಕ್ಕೆ ಪಾಲಿಥಿನ್ ಹೂಡಿಕೆ ಮಾಡಿಕೊಡುವುದು.
  • ಕೃಷಿ ಹೊಂಡಕ್ಕೆ ತಂತಿ ಬೇಲಿ ನಿರ್ಮಾಣ ಮಾಡಿಕೊಡುವುದು.
  • ಕೃಷಿ ಹೊಂಡ ದಿಂದ ನೀರೆತ್ತಲು ಡೀಸೆಲ್ / ಸೋಲಾರ್ ಪಂಪ್ ಸೆಟ್ ವಿತರಣೆ.
  • ಹನಿ ನೀರಾವರಿ / ತುಂತುರು ನೀರಾವರಿ ಘಟಕ ಸ್ಥಾಪನೆ.

ಈ ಪ್ರಮುಖ 6 ಘಟಕಗಳನ್ನು ಸ್ಥಾಪನೆ ಮಾಡಲು ರೈತರಿಗೆ ಸಬ್ಸಿಡಿ ನೀಡಲಾಗುವುದು, ರಾಜ್ಯದ 24 ಜಿಲ್ಲೆಗಳ 106 ಪ್ರದೇಶಗಳ ರೈತರಿಗೆ 200 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಡಲಾಗಿದೆ.

ಪ್ಯಾಕೇಜ್ ಮಾದರಿಯ ಕೃಷಿ ಭಾಗ್ಯ ಯೋಜನೆ

ಕೃಷಿ ಭಾಗ್ಯ ಯೋಜನೆಯಡಿ 6 ಪ್ರಮುಖ ಘಟಕಗಳ ಸ್ಥಾಪನೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಪ್ಯಾಕೇಜ್ ಮಾದರಿಯಲ್ಲಿ ರೈತರಿಗೆ ಪ್ರಯೋಜನ ನೀಡಲು ಸರ್ಕಾರ ಅರ್ಜಿಯನ್ನು ಆಹ್ವಾನಿಸಿದೆ.