Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರೇಮಿಗಳ ದಿನ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಲವ್ ಸಕ್ಸಸ್!

ನಾಳೆ ವ್ಯಾಲೆಂಟೈನ್ಸ್ ಡೇ. ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರೇಮಿಗಳ ದಿನದಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ತಮ್ಮ ಗೆಳೆಯ/ಗೆಳತಿಗೆ ಉಡುಗೊರೆಗಳನ್ನು ನೀಡುತ್ತಾರೆ. ನೀವು ಪ್ರತಿ ವರ್ಷ ನಿಮ್ಮ ಸಂಗಾತಿಗೆ ಉಡುಗೊರೆಗಳನ್ನು ಖರೀದಿಸುತ್ತೀರಾ? ಈ ವರ್ಷ ಏನು ಉಡುಗೊರೆ ನೀಡಬೇಕೆಂದು ಯೋಚಿಸುತ್ತಿದ್ದೀರಾ? ಚಿಂತಿಸಬೇಡಿ ವಾಸ್ತುಶಾಸ್ತ್ರದ ಪ್ರಕಾರ ಉಡುಗೊರೆ ನೀಡಿದರೆ ನಿಮ್ಮ ಲವ್ ಸಕ್ಸಸ್ ಆಗುವುದರಲ್ಲಿ ಅನುಮಾನವೇ ಇಲ್ಲ.
ಆದ್ದರಿಂದ ಈ ವರ್ಷ ವಾಸ್ತು ಪ್ರಕಾರ ನಿಮ್ಮ ಜೀವನ ಸಂಗಾತಿಗೆ ಉಡುಗೊರೆಗಳನ್ನು ಖರೀದಿಸಿ. ಇದು ನಿಮ್ಮ ಸಂಬಂಧದಲ್ಲಿ ಮಾಧುರ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮಿಬ್ಬರ ನಡುವಿನ ಸಂಬಂಧ ಬಲಗೊಳ್ಳುತ್ತದೆ. ನಿಮ್ಮ ಸಂಬಂಧವು ಗಟ್ಟಿಯಾಗುತ್ತದೆ. ಈಗ ವಾಸ್ತು ಪ್ರಕಾರ ಪ್ರೇಮಿಗಳ ದಿನದ ಉಡುಗೊರೆಯಾಗಿ ಯಾವ ವಸ್ತುಗಳನ್ನು ನೀಡಬಹುದು ಎಂದು ನೋಡೋಣ.


ಬಿದಿರು ಗಿಡ: ಬಿದಿರಿನ ಸಸ್ಯವನ್ನು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮಂಗಳಕರವಾದ ಸಸ್ಯವೆಂದು ಪರಿಗಣಿಸಲಾಗಿದೆ. ನಿಮ್ಮ ಸಂಗಾತಿ ಸಸ್ಯಗಳನ್ನು ಪ್ರೀತಿಸುತ್ತಿದ್ದರೆ, ಈ ಪ್ರೇಮಿಗಳ ದಿನದಂದು ಅವರಿಗೆ ಬಿದಿರಿನ ಗಿಡವನ್ನು ಉಡುಗೊರೆಯಾಗಿ ನೀಡಿ. ಹೀಗಾಗಿ ನಿಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಶಾಂತಿಯು ಮೇಲುಗೈ ಸಾಧಿಸುತ್ತದೆ. ಮಾತ್ರವಲ್ಲದೆ ನಿಮ್ಮ ಸಂಗಾತಿಯು ಜೀವನದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ.

ನಗುವ ಬುದ್ಧನ ಪ್ರತಿಮೆ: ವಾಸ್ತು ಶಾಸ್ತ್ರದಲ್ಲಿ ನಗುತ್ತಿರುವ ಬುದ್ಧನ ಪ್ರತಿಮೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಪ್ರೇಮಿಗಳ ದಿನದಂದು ನೀವು ನಿಮ್ಮ ಗೆಳೆಯ/ಗೆಳತಿಗೆ ನಗುತ್ತಿರುವ ಬುದ್ಧನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಬಹುದು. ಈ ವಿಗ್ರಹವನ್ನು ಉಡುಗೊರೆಯಾಗಿ ನೀಡಿದಾಗ ಅದು ನಿಮ್ಮ ಸಂಗಾತಿಯ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ.

ಕೆಂಪು ಹೂವುಗಳು: ಕೆಂಪು ಗುಲಾಬಿಗಳು ಪ್ರೀತಿಯ ಸಂಕೇತವಾಗಿವೆ. ವಾಸ್ತು ಶಾಸ್ತ್ರದ ಪ್ರಕಾರ ಈ ಕೆಂಪು ಗುಲಾಬಿ ಹೂವುಗಳು ತುಂಬಾ ಮಂಗಳಕರ. ಈ ಹೂವುಗಳನ್ನು ಅರ್ಪಿಸಿದಾಗ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಹೂವುಗಳನ್ನು ನೀಡುವಾಗ ತಪ್ಪಿಸಬೇಕಾದ ತಪ್ಪುಗಳು: ಪ್ರೇಮಿಗಳ ದಿನದಂದು ಹೆಚ್ಚಿನ ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕೆಂಪು ಗುಲಾಬಿಗಳನ್ನು ನೀಡುತ್ತಾರೆ. ಆದರೆ ಅಂತಹ ಗುಲಾಬಿಗಳನ್ನು ನೀಡುವಾಗ ಹೂವು ಮುಳ್ಳುಗಳನ್ನು ಹೊಂದಿರಬಾರದು. ಮುಳ್ಳುಗಳಿರುವ ಹೂಗಳನ್ನು ಕೊಟ್ಟರೆ ಪ್ರೀತಿಯನ್ನು ಹೆಚ್ಚಿಸುವ ಬದಲು ಸಮಸ್ಯೆಗಳು ಹೆಚ್ಚಿ ಸಂಬಂಧದಲ್ಲಿ ಬಿರುಕು ಮೂಡುತ್ತದೆ.

ಉಡುಗೊರೆಗೆ ಕಾಗದದ ಬಣ್ಣವೂ ಮುಖ್ಯ: ಸಾಮಾನ್ಯವಾಗಿ ಉಡುಗೊರೆಗಳನ್ನು ನೀಡುವಾಗ ನಾವು ಉಡುಗೊರೆಗಳನ್ನು ಪ್ಯಾಕ್ ಮಾಡಿವಾಗ ಬಣ್ಣ ಬಣ್ಣ ಕಾಗದದಲ್ಲಿ ಸುತ್ತಿಕೊಡುತ್ತೇವೆ. ವಾಸ್ತು ಶಾಸ್ತ್ರದಲ್ಲಿ ಯಾರಿಗಾದರೂ ಉಡುಗೊರೆ ನೀಡುವಾಗ ಉಡುಗೊರೆ ಕಾಗದದ ಬಣ್ಣವು ಸಂಬಂಧದ ಮೇಲೆ ಪ್ರಭಾವ ಬೀರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಈ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡುವಾಗ ಉಡುಗೊರೆಯ ಬಾಕ್ಸ್‌ ಗೆ ನೀಲಿ, ಕಪ್ಪು ಅಥವಾ ಬಿಳಿ ಕಾಗದವನ್ನು ಬಳಸಬೇಡಿ. ಬದಲಿಗೆ ಚಿನ್ನದ ಬಣ್ಣ, ಕೆಂಪು, ಗುಲಾಬಿ, ಹಳದಿ ಕಾಗದವನ್ನು ಬಳಸಬಹುದು.