Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಸವಣ್ಣನವರು ವೇದಗಳ ವಿರೋಧಿ ಆಗಿರಲಿಲ್ಲ.! ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.!

ಚಿತ್ರದುರ್ಗ: ಬಸವಣ್ಣನವರು ವೇದ, ಉಪನಿಷತ್ತುಗಳ ವಿರೋಧಿಯಾಗಿದ್ದರು ಎಂಬ ತಪ್ಪು ಪ್ರಜ್ಞೆ ಈಗ ಮೂಡುತ್ತಿದೆ. ಬಸವಣ್ಣನವರು ವೇದಗಳ ವಿರೋಧಿ ಆಗಿರಲಿಲ್ಲ. ವಚನ ಸಾಹಿತ್ಯದಲ್ಲಿ ಮುಕ್ತ ಚಿಂತನೆಗಳಿದ್ದು, ಅವುಗಳನ್ನು ಅರ್ಥ  ಮಾಡಿಕೊಳ್ಳಬೇಕು ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಸಿರಿಗೆರೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತರಳಬಾಳು ಮಠ ಏರ್ಪಡಿಸಿದ್ದವಚನ ಸಾಹಿತ್ಯದಪ್ರಸ್ತುತತೆ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಭಾನುವಾರ ಆಶೀರ್ವಚನ ನೀಡು ವಾಗ , ಇತ್ತೀಚೆಗೆ ವಚನ ಸಾಹಿತ್ಯ ಓದಿಕೊಂಡವರೂ ಮೂಲಭೂತವಾದಿ ಆಗುತ್ತಿರುವುದು ವಿಷಾದನೀಯ. ಲಿಂಗಾಯತ ಧರ್ಮದಲ್ಲೂ ಕೆಲವರು ಇಂತಹ ಗೊಂದಲ ಹಬ್ಬಿಸುತ್ತಿದ್ದಾರೆ ಎಂದರು.

ವೇದಗಳಲ್ಲಿ ಕರ್ಮಕಾಂಡ ಮತ್ತು ಜ್ಞಾನಕಾಂಡ ಎಂಬ ಭಾಗಗಳಿವೆ. ಕರ್ಮಕಾಂಡದಲ್ಲಿ ಜೀವವಿರೋಧಿ ನಿಲುವು ತಾಳುವ ಪ್ರಾಣಿಬಲಿ ಮತ್ತು ಯಜ್ಞದ ವಿಚಾರಗಳಿವೆ. ಇಂತಹ ನಿಲುವುಗಳಿಗೆ ಬಸವಣ್ಣನವರು ಪ್ರತಿರೋಧ ವ್ಯಕ್ತಪಡಿಸಿದ್ದರೇ ವಿನಾ, ವೇದ ಮತ್ತು ಉಪನಿಷತ್ತುಗಳನ್ನು ಸಾರಾಸಗಟಾಗಿ ತಿರಸ್ಕರಿಸಿಲ್ಲಎಂದು ಹೇಳಿದರು.