Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಹುಭಾಷಾ ಖ್ಯಾತ ಗಾಯಕ ಪಂಕಜ್ ಉದಾಸ್ ನಿಧನ..!

ಬಾಲಿವುಡ್ ಚಿತ್ರರಂಗದ ಹೆರಾಂತ ಗಾಯಕ ಹಾಗೂ ಜಝಲ್ ಮಾಂತ್ರಿಕ ಪಂಕಜ್ ಉದಾಸ್ ನಿಧನ ಹೊಂದಿದರು.ಪಂಕಜ್ ಉದಾಸ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇವರು ಬಾಲಿವುಡ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಕನ್ನಡದ ಸುದೀಪ್ ನಟನೆಯ ಸ್ಪರ್ಶ ಸಿನಿಮಾದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ’ ಹಾಡನ್ನು ಹಾಡಿದ್ದಾರೆ. ಪಂಕಜ್ ಉದಾಸ್ ನಿಧನಕ್ಕೆ ಬಾಲಿವುಡ್, ಗಝಲ್ ಪ್ರೇಮಿಗಳ ಕಂಬನಿ ಮಿಡಿದಿದ್ದಾರೆ.