Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಸಿಲಿನಲ್ಲಿ ದೇಹಕ್ಕೆ ನೀರಿನಂಶ ಕಾಪಾಡಿಕೊಳ್ಳಲು ಹೀಗೆ ಮಾಡಿ

ಈ ವರ್ಷದ ಬೇಸಿಗೆಯಲ್ಲಿ ಸೂರ್ಯನ ತಾಪಮಾನ ಅತೀ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ದೇಹದಲ್ಲಿ ನೀರಿನಂಶ ಯಾವ ರೀತಿ ಸರಿಪಡಿಸಿಕೊಳ್ಳಬೇಕು ಯಾವ ಹಣ್ಣು ತರಕಾರಿ ಪ್ರಯೋಜನಕಾರಿ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಹಣ್ಣು, ತರಕಾರಿ, ಆರೋಗ್ಯಕರ ಕೊಬ್ಬು, ನಾರಿನಂಶ, ಕಾರ್ಬೋಹೈಡ್ರೇಟ್‌ ಅಂಶಗಳಿರುವ ಆಹಾರ ಸೇವಿಸಬೇಕು. ಇದರೊಂದಿಗೆ ಧಾನ್ಯಗಳು, ಒಣಹಣ್ಣುಗಳು, ಹಸಿರು ಸೊಪ್ಪು ಹಾಗೂ ಹಣ್ಣುಗಳು ನಮ್ಮ ಆರೋಗ್ಯದಲ್ಲಿ ಸಮ ಪ್ರಮಾಣದಲ್ಲಿ ಇರಬೇಕು. ಈ ಮೂಲಕ ದೇಹದ ತಾಪವನ್ನು ಕಡಿಮೆಯಾಗುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ದೇಹದಲ್ಲಿ ನೀರಿನಾಂಶ ಜಾಸ್ತಿ ಮಾಡಲು ನೀರು ಹೆಚ್ಚಾಗಿಯೇ ಕುಡಿಯಬೇಕು.

ನೀರಿನಾಂಶ ಅಧಿಕವಾಗಿರುವ ಎಳೆನೀರು, ಅನಾನಸ್‌, ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ಆರೆಂಜ್​​ನಂತಹ ಹಣ್ಣುಗಳನ್ನು ಸೇವಿಸುವುದು ಉತ್ತಮ. ಬೇಸಿಗೆ ಆಗಿದ್ದರಿಂದ ಆದಷ್ಟು ನಾನ್​ವೆಜ್​ ಹಾಗೂ ಮೊಟ್ಟೆಯಿಂದ ಮಾಡುವ ಖಾದ್ಯಗಳನ್ನ ಕಡಿಮೆ ತಿನ್ನುವುದು ಉತ್ತಮ. ಪಾನಿಪುರಿ, ಬೇಲ್​ಪುರಿ ಸೇರಿದಂತೆ ಸಂಜೆಯ ಚಾಟ್ಸ್​ ಸೇವನೆ ಕಡಿಮೆ ಮಾಡಿದರೆ ಅಸಿಡಿಟಿ, ಎದೆಯುರಿ, ತಡೆಯಬಹುದು. ತೆಂಗಿನ ನೀರು, ನಿಂಬೆ ರಸ, ಮಜ್ಜಿಗೆ ಮತ್ತು ಕಬ್ಬಿನ ರಸದಂತ ಪಾನೀಯಗಳನ್ನು ಕುಡಿಯಬೇಕು. ತುಳಸಿ ಬೀಜಗಳನ್ನು ಮಿಕ್ಸ್ ಮಾಡಿ ಕುಡಿದರೆ ದೇಹವನ್ನು ಇನ್ನಷ್ಟು ತಂಪಾಗಿರುವಂತೆ ಸಹಕರಿಸುತ್ತದೆ. ಇವುಗಳಲ್ಲದೇ ಮೊಸರು ಈ ಬಿಸಿಲಿಗೆ ಉತ್ತಮವಾದದ್ದು. ಏಕೆಂದರೆ ಮೊಸರು ಕರುಳಿನಲ್ಲಿ ಅವಶ್ಯಕ ಬ್ಯಾಕ್ಟೀರಿಗಳನ್ನ ಹೆಚ್ಚಿಸಿ ಜೀರ್ಣಕ್ರಿಯೆಗೆ ಸಹಕರಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.