Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೆಳ್ಳುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲು

ಬೆಂಗಳೂರು: ಕೆಲ ದಿನಗಳ ಹಿಂದೆ ಕೆ.ಜಿ ಟೊಮೆಟೋ, ಈರುಳ್ಳಿ 100ರ ಗಡಿದಾಟಿತ್ತು. ಇದೀಗ ಕೆ.ಜಿ ಬೆಳ್ಳುಳ್ಳಿ 500 ರ ಗಡಿ ದಾಟಿದ್ದು, ಈ ಮೂಲಕ ಈರುಳ್ಳಿ ಹಾಗೂ ಟೊಮೆಟೋ ದರದ ಐದು ಪಟ್ಟು ಏರಿಕೆಯಾಗಿದೆ.

ಈ ವರ್ಷ ಮಳೆ ಸರಿಯಾಗಿ ಆಗದೆ, ಬೆಳ್ಳುಳ್ಳಿಯ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಆದ್ದರಿಂದ ಕೆ.ಜಿ ಬೆಳ್ಳುಳ್ಳಿ ದರ ಅರ್ಧ ಸಾವಿರ ಮುಟ್ಟಿದೆ. ಇನ್ನು ಬಿಡಿಸಿದ ಬೆಳ್ಳುಳ್ಳಿಯ ಬೆಲೆ ಕೆ.ಜಿ ಗೆ 540 ರೂ. ತಲುಪಿದ್ದರೆ, ಉಂಡೆ ಬೆಳ್ಳುಳ್ಳಿಯ ಬೆಲೆ ಕೆ.ಜಿ ಗೆ 492 ರೂ. ತಲುಪಿದೆ.

ಸಾಮಾನ್ಯವಾಗಿ ಸಾಂಬರ್, ಗೋಬಿ, ಮಾಂಸಹಾರಿ ಖಾದ್ಯಗಳಿಗೆ ಹೀಗೆ ಅನೇಕ ಅಡುಗೆಗಳಿಗೆ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸುತ್ತಾರೆ. ಈ ಅಡುಗೆಗಳನ್ನು ರುಚಿ ರುಚಿಯಾಗಿ ಮಾಡಲು ಬೆಳ್ಳುಳ್ಳಿ ಅತ್ಯವಶ್ಯಕ. ಆದರೆ ಇದೀಗ ಬೆಳ್ಳುಳ್ಳಿಯ ದರ ಏರಿಕೆ ಆಗಿರುವುದರಿಂದ ಬೆಳ್ಳುಳ್ಳಿ ಬಳಸಿ ಅಡುಗೆ ಮಾಡಲು ಜನ ಹಿಂದೇಟು ಹಾಕುವಂತಾಗಿದೆ.