Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೇಸಿಗೆಯಲ್ಲಿ ಮುಖದ ಚರ್ಮವನ್ನು ತಂಪಾಗಿಸಲು ಮತ್ತು ಮುಖದ ಕಾಂತಿ ಹೆಚ್ಚಿಸಲು ಈ ಮನೆಮದ್ದನ್ನು ಬಳಸಿ

ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಮುಖದಲ್ಲಿ ಬೆವರು, ಗುಳ್ಳೆಗಳ ಸಮಸ್ಯೆ ಅಧಿಕವಾಗಿ ಮುಖದ ಕಾಂತಿ ಕಡಿಮೆಯಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಮತ್ತು ಮುಖದ ಕಾಂತಿ ಹೆಚ್ಚಿಸಲು ಈ ಫೇಸ್ ಪ್ಯಾಕ್ ಗಳನ್ನು ಬಳಸಿ. ಶ್ರೀಗಂಧದ ಪುಡಿಗೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ ಅದು ಒಣಗಿದ ಬಳಿಕ ಮುಖವನ್ನು ವಾಶ್ ಮಾಡಿ. ಇದು ಮುಖದ ಚರ್ಮವನ್ನು ತಂಪಾಗಿಸುತ್ತದೆ.

ಮುಖದಲ್ಲಿರುವ ಗುಳ್ಳೆಗಳನ್ನು ನಿವಾರಿಸಲು 1 ಚಮಚ ಶ್ರೀಗಂಧದ ಪುಡಿ ಮತ್ತು 1 ಚಮಚ ಅಕ್ಕಿಹಿಟ್ಟನ್ನು ಹಾಲಿಗೆ ಬೆರೆಸಿಮುಖಕ್ಕೆ ಹಚ್ಚಿ ಇದು ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ. 2 ಚಮಚ ಅಲೋವೆರಾ, 1 ಚಮಚ ರೋಸ್ ವಾಟರ್ ಮತ್ತು 1 ಚಮಚ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿದರೆ ಚರ್ಮದ ಹೊಳಪು ಹೆಚ್ಚಾಗುತ್ತದೆ. ಕಡಲೆಬೇಳೆ ಹಿಟ್ಟನ್ನು ಮುಖಕ್ಕೆ ಹಚ್ಚಿದರೆ ಇದು ಮುಖದ ಕಲೆಗಳನ್ನು ತೆಗೆದು ಹಾಕಿ, ಚರ್ಮವನ್ನು ಮೃದುವಾಗಿಸುತ್ತದೆ. ಕಡಲೆಬೇಳೆ ಹಿಟ್ಟು ಮತ್ತು ಅಲೋವೆರಾ ಮಾಸ್ಕ್. ಇದು ಮುಖವನ್ನು ಆರ್ಧ್ರಕಗೊಳಿಸುತ್ತದೆ. ಕಡಲೆಬೇಳೆ ಹಿಟ್ಟು ಮತ್ತು ಅಲೋವೆರಾ ಮಾಸ್ಕ್ ಪ್ರತಿದಿನ ಮುಖಕ್ಕೆ ಹಚ್ಚಬಹುದು.

ಇದು ಚರ್ಮದಲ್ಲಿ ಕಾಲಜನ್ ಪ್ರಮಾಣ ಹೆಚ್ಚಿಸುತ್ತದೆ.ಒಂದು ಟೀಚಮಚ ಕಡಲೆಬೇಳೆ ಹಿಟ್ಟು ಮತ್ತು ಅಲೋವೆರಾ ಮಾಸ್ಕ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಕೆಲವು ಹನಿ ರೋಸ್ ವಾಟರ್ ಮಿಕ್ಸ್ ಮಾಡಿ. ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಒಣಗಲು ಬಿಡಿ. ನಂತರ ಮುಖ ತೊಳೆಯಿರಿ. ಇದು ಚರ್ಮದ ತೇವಾಂಶ ಕಾಪಾಡುತ್ತದೆ. ಅಕಾಲಿಕವಾಗಿ ಸುಕ್ಕುಗಳಿಂದಲೂ ಪರಿಹಾರ ದೊರೆಯುತ್ತದೆ. ಕಡಲೆಬೇಳೆ ಹಿಟ್ಟು, ಜೇನುತುಪ್ಪ ಮತ್ತು ಮುಲ್ತಾನ್‌ ಮಿಟ್ಟಿ ಮಾಸ್ಕ್. ಇದು ಸುಕ್ಕುಗಳ ಸಮಸ್ಯೆ ಹೋಗಲಾಡಿಸುತ್ತದೆ. ಮುಲ್ತಾನ್‌ ಮಿಟ್ಟಿ, ಕಡಲೆಬೇಳೆ ಹಿಟ್ಟು ಮತ್ತು ಜೇನುತುಪ್ಪ ಮಿಕ್ಸ್ ಮಾಡಿ, ಪೇಸ್ಟ್ ನ್ನು ಮುಖ, ಕುತ್ತಿಗೆ ಮತ್ತು ಗಲ್ಲಕ್ಕೆ ಚೆನ್ನಾಗಿ ಹಚ್ಚಿರಿ. ನಂತರ ಮಸಾಜ್ ಮಾಡಿ. ಸ್ವಲ್ಪ ಸಮಯ ಹಾಗೇ ಬಿಟ್ಟು, ನಂತರ ತೊಳೆಯಿರಿ. ಇದು ಸುಕ್ಕುಗಳ ಸಮಸ್ಯೆ ಕಡಿಮೆ ಮಾಡಿ, ತ್ವಚೆ ಬಿಗಿಯಾಗಿಸುತ್ತದೆ.