Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೇಸಿಗೆ ಬಂತು ದೇಹದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಕಾಣಿಸುತ್ತವೆಯೇ.? ಹಾಗಾದ್ರೆ ಮನೆಯ ಮದ್ದು ಬಳಸಿ.!

 

 

ಪ್ರಾರಂಭದಲ್ಲಿ ನಮ್ಮ ದೇಹವು ಚಳಿಗಾಲದಿಂದ ಬೇಸಿಗೆ ಕಾಲದ ಹವಾಮಾನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚಿನವರಿಗೆ ಆರೋಗ್ಯವು ಕೈ ಕೊಡುತ್ತದೆ. ಈ ಸಮಯದಲ್ಲಿ ವಿಪರೀತ ಬಿಸಿಲಿನಿಂದ ಚರ್ಮದ ಸಮಸ್ಯೆಗಳು ಕಾಡುವುದು ಸರ್ವೇ ಸಾಮಾನ್ಯ. ದೇಹದಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು ಎದ್ದು, ಕೀವು ತುಂಬಿಕೊಳ್ಳುತ್ತದೆ, ಇಲ್ಲದಿದ್ದರೆ ವಿಪರೀತ ತುರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಸಮಸ್ಯೆಯಿಂದ ಮುಕ್ತರಾಗಲು ಮನೆ ಮದ್ದನ್ನು ಪ್ರಯತ್ನಿಸಬಹುದು

ತೊಳೆದ ಅಕ್ಕಿಯ ನೀರಿನಿಂದ ಮೈಯನ್ನು ತೊಳೆದುಕೊಳ್ಳುವುದರಿಂದ ಬೆವರು ಗುಳ್ಳೆಗಳು ಕಡಿಮೆಯಾಗುತ್ತದೆ.

* ಬದನೆಕಾಯಿ ನೆನೆಹಾಕಿದ ನೀರಿನಲ್ಲಿ ಕೈಕಾಲು ಮುಖ ತೊಳೆಯುತ್ತಿದ್ದರೆ ಗುಳ್ಳೆಯಂತಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಗುಳ್ಳೆಯ ಮೇಲೆ ಲೇಪಿಸುತ್ತಿದ್ದರೆ ಬಹುಬೇಗನೆ ಶಮನವಾಗುತ್ತದೆ.

* ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಬೆವರು ಸಾಲೆಯ ಮೇಲೆ ದಿನಕ್ಕೆ ಒಂದೆರಡು ಬಾರಿ ಹಚ್ಚಿದರೆ ಗುಳ್ಳೆಗಳು ಇಲ್ಲದಂತಾಗುತ್ತದೆ.

* ಬಿಸಿ ನೀರಿಗೆ ಕಲ್ಲು ಉಪ್ಪು ಬೆರೆಸಿ ಸ್ನಾನ ಮಾಡಿದರೆ ಚರ್ಮದ ಸೋಂಕು ಸೇರಿದಂತೆ ಬೆವರುಗುಳ್ಳೆಗಳಿಗೆ ಪರಿಣಾಮಕಾರಿಯಾದ ಮನೆ ಮದ್ದಾಗಿದೆ.

* ಪ್ರತಿ ದಿನವೂ ತಣ್ಣೀರು ಸ್ನಾನ ಮಾಡಿದರೆ ಈ ಸಮಸ್ಯೆಯು ದೂರವಾಗುತ್ತದೆ.

 

* ನೆಲ್ಲಿಕಾಯಿಯನ್ನು ಜಜ್ಜಿ ತೆಗೆದ ರಸವನ್ನು ಮೈಗೆ ಹಚ್ಚುತ್ತಿದ್ದರೆ ಬೆವರುಗುಳ್ಳೆಗಳೂ ಇಲ್ಲದಂತಾಗುತ್ತದೆ.

 

* ತೆಂಗಿನ ಎಣ್ಣೆಯನ್ನು ಸೌತೆಕಾಯಿ ರಸದೊಂದಿಗೆ ಬೆರೆಸಿ ಈ ಬೆವರು ಗುಳ್ಳೆಗಳ ಮೇಲೆ ಹಚ್ಚಿದರೆ ಗುಣಮುಖವಾಗುತ್ತದೆ.

 

* ರೋಸ್ ವಾಟರ್‌ಗೆ ಶ್ರೀಗಂಧದ ಪುಡಿ, ಲಾವಂಚದ ಪುಡಿ ಈ ಎಲ್ಲವನ್ನು ಸಮಪ್ರಮಾಣದಲ್ಲಿ ಸೇರಿಸಿಮಿಶ್ರಣ ಮಾಡಿ, ಬೆವರು ಗುಳ್ಳೆಗಳ ಮೇಲೆ ಲೇಪಿಸುವುದರಿಂದ ಪರಿಣಾಮಕಾರಿಕಾರಿ ಔಷಧಿಯಾಗಿದೆ.

 

* ತುಳಸಿ ರಸ ಮತ್ತು ಶುಂಠಿಯನ್ನು ಸೇರಿಸಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಇದನ್ನು ಪ್ರತಿ ದಿನ ಹಚ್ಚುತ್ತ ಬರುವುದರಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತದೆ.

 

* ಅರಶಿನ ಮತ್ತು ಶುಂಠಿಯನ್ನು ಚೆನ್ನಾಗಿ ರುಬ್ಬಿಕೊಂಡು, ಈ ಮಿಶ್ರಣವನ್ನು ನೇರವಾಗಿ ಗುಳ್ಳೆಯ ಮೇಲೆ ಹಚ್ಚುವುದು ಪರಿಣಾಮಕಾರಿ.

 

* ಬೇಯಿಸಿದ ಮೊಟ್ಟೆಯ ಬಿಳಿ ಭಾಗವನ್ನು ನೆನಸಿ, ಅದನ್ನು ಗುಳ್ಳೆಯ ಮೇಲೆ ಇಡುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗುವುದು ಸುಲಭ.