Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬ್ರಿಟನ್ 3ನೇ ಚಾರ್ಲ್ಸ್‌ಗೆ ಕ್ಯಾನ್ಸರ್; ಶೀಘ್ರವೇ ಚೇತರಿಸಿಕೆ ಹಾರೈಸಿದ ಮೋದಿ

ನವದೆಹಲಿ: ಬ್ರಿಟನ್ ನ ರಾಜ 3ನೇ ಚಾರ್ಲ್ಸ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ. ಇದೀಗ ಈ ವಿಚಾರವಾಗಿ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಅವರು, ಕ್ಯಾನ್ಸರ್‌ನಿಂದ ಬಳಲುತ್ತಿರುವ ಬ್ರಿಟನ್ ನ ರಾಜ 3ನೇ ಚಾರ್ಲ್ಸ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರು ಅದಷ್ಟು ಬೇಗ ಗುಣಮುಖರಾಗಲಿ. ಅವರಿಗೆ ಒಳ್ಳೆ ಆರೋಗ್ಯ ಸಿಗಲಿ. ಅವರ ಆರೋಗ್ಯದ ಚೇತರಿಕೆಗಾಗಿ ಭಾರತದ ಜನರೊಂದಿಗೆ ಸೇರಿ ನಾನು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಇನ್ನು 3ನೇ ಚಾರ್ಲ್ಸ್ ಗೆ ಕ್ಯಾನ್ಸರ್ ದೃಡಪಟ್ಟಿದ್ದು, ಇರುವುದರಿಂದ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳದೇ ಇರುವಂತೆ ವೈದ್ಯರು ತಿಳಿಸಿದ್ದಾರೆ. ಹೀಗಿದ್ದರೂ ಈ ಅವಧಿಯಲ್ಲಿ ಅಧಿಕೃತ ಕೆಲಸವನ್ನು ಮುಂದುವರಿಸುತ್ತಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆ ಸ್ಪಷ್ಟಪಡಿಸಿದೆ.