Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಗತ್ ಸಿಂಗ್, ಡಾ.ಬಿಆರ್ ಅಂಬೇಡ್ಕರ್ ಮಧ್ಯೆ ಜೈಲಿನಲ್ಲಿರುವ ಕೇಜ್ರಿವಾಲ್ ಫೋಟೋ – ಭಗತ್‌ಸಿಂಗ್ ಮೊಮ್ಮಗ ಆಕ್ರೋಶ

ನವದೆಹಲಿ : ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳ ಮಧ್ಯೆದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿರುವ ಭಾವಚಿತ್ರವನ್ನ ಪ್ರದರ್ಶಿಸಿದ್ದಕ್ಕಾಗಿ ಭಗತ್ ಸಿಂಗ್ ಮೊಮ್ಮಗ ಯಾದ್ವಿಂದರ್ ಸಂಧು ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ವಿಡಿಯೋ ಬಂದಿದ್ದು, ಅದರಲ್ಲಿ ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಅರವಿಂದ್ ಕೇಜ್ರಿವಾಲ್ ಫೋಟೋವನ್ನ ಗೋಡೆಯ ಮೇಲೆ ಹಾಕಲಾಗಿದೆ.

ಇದನ್ನು ನೋಡಿದ ನಂತ್ರ ನನಗೆ ಭಯಂಕರವೆನಿಸಿತು. ಅವರನ್ನ ದಂತಕಥೆಗಳೊಂದಿಗೆ ಹೋಲಿಸುವ ಪ್ರಯತ್ನ ನಡೆಯಿತು, ಅಂತಹ ಚಟುವಟಿಕೆಗಳಿಂದ ದೂರವಿರಲು ನಾನು ಆಮ್ ಆದ್ಮಿ ಪಕ್ಷವನ್ನ ಕೇಳುತ್ತೇನೆ ಎಂದು ಯಾದ್ವಿಂದರ್ ಸಂಧು ಕಿಡಿಕಾರಿದ್ದಾರೆ. ಭಗತ್ ಸಿಂಗ್ ಹಾಗೂ ಡಾ. ಬಿ. ಆರ್ ಅಂಬೇಡ್ಕರ್‌ ಅವರು ದೇಶದ ಜನರಿಗಾಗಿ ತಮ್ಮ ಜೀವನವನ್ನ ತ್ಯಾಗ ಮಾಡಿದರು. ಇದಕ್ಕೆ ವ್ಯತಿರಿಕ್ತವಾಗಿ, ಎಎಪಿಯ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಶಿಕ್ಷೆಯನ್ನ ಎದುರಿಸುತ್ತಿದ್ದಾರೆ ಎಂದರು.