Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭದ್ರಾ ನಾಲೆ:  ಅನಧಿಕೃತ ಪಂಪ್‌ಸೆಟ್ ತೆರವಿಗೆ ಮುಂದಾದ ಜಿಲ್ಲಾಡಳಿತ, ತಂಡಗಳ ರಚನೆ

 

ದಾವಣಗೆರೆ: ಪ್ರಸಕ್ತ ವರ್ಷದ ಮುಂಗಾರು ಹಾಗೂ ಹಿಂಗಾರು ವೈಫಲ್ಯದಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಇದರಿಂದ ಸರದಿಯನ್ವಯ ನೀರು ಬಿಡಲು ಭದ್ರಾ ಕಾಡಾ ಮಂಡಳಿ ನಿರ್ಧಾರದಂತೆ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ಕೊಡಲು ಕಾಲುವೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳ ತೆರವಿಗಾಗಿ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ಅಧಿಕಾರಿಗಳ ತಂಡ ರಚಿಸಿ ಆದೇಶಿಸಿದ್ದಾರೆ.

ವಿದ್ಯುತ್ ಸಂಪರ್ಕ ಕಲ್ಪಿಸಿದ್ದಲ್ಲಿ ಇದನ್ನು ಕಡಿತಗೊಳಿಸುವುದು ಮತ್ತು ಡೀಸೆಲ್ ಜನರೇಟರ್ ಅಳವಡಿಸಿದ್ದಲ್ಲಿ ಅದನ್ನು ಕಡಿತ ಮಾಡುವುದು ಮತ್ತು ನಾಲೆಯಲ್ಲಿ ನೀರೆತ್ತಲು ಅಳವಡಿಸಿದ ಎಲ್ಲಾ ಪೈಪ್‌ಗಳನ್ನು ತೆರವು ಮಾಡಲು ಮತ್ತು ಒಂದು ವೇಳೆ ತೆರವು ಮಾಡದಿದ್ದಲ್ಲಿ ವಶಕ್ಕೆ ಪಡೆಯಲು ಕಂದಾಯ, ಪಾಲಿಕೆ, ಪೊಲೀಸ್, ನೀರಾವರಿ ಇಲಾಖೆ ಹಾಗೂ ಬೆಸ್ಕಾಂ ಇಂಜಿನಿಯರ್‌ಗಳ ತಂಡವನ್ನು ರಚಿಸಲಾಗಿದೆ.

ದಾವಣಗೆರೆ ತಾ; ತಹಶೀಲ್ದಾರರು, ಉಪ ತಹಶೀಲ್ದಾರರು, ಪಾಲಿಕೆ ಸಿಬ್ಬಂದಿ, ವೃತ್ತ ನಿರೀಕ್ಷಕರು, ಮಾಯಕೊಂಡ, ಗ್ರಾಮಾಂತರ, ಹದಡಿ, ಮಾಯಕೊಂಡ, ಕಾರ್ಯಪಾಲಕ ಇಂಜಿನಿಯರ್, ನೀರಾವರಿ ನಿಗಮ, ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹರಿಹರ ತಾ; ತಹಶೀಲ್ದಾರ್, ಉಪ ತಹಶೀಲ್ದಾರ್ ಹಾಗೂ ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು, ಹರಿಹರ, ಮಲೆಬೆನ್ನೂರು ಹರಿಹರ ಗ್ರಾಮಾಂತರ ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು, ಭದ್ರಾ ನಾಲಾ ವಿಭಾಗದ ಇಂಜಿನಿಯರ್, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಚನ್ನಗಿರಿ; ತಹಶೀಲ್ದಾರರು, ಉಪ ತಹಶೀಲ್ದಾರರು, ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು, ಸಂತೇಬೆನ್ನೂರು, ಚನ್ನಗಿರಿ, ಬಸವಾಪಟ್ಟಣ ಠಾಣಾ ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು, ಭದ್ರಾ ನಾಲಾ ವಿಭಾಗದ ಇಂಜಿನಿಯರ್, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳ ತಂಡಗಳನ್ನು ರಚನೆ ಮಾಡಿ ತಕ್ಷಣದಿಂದಲೇ ಕಾರ್ಯಾಚರಣೆ ಮಾಡಲು ಆದೇಶಿಸಿದ್ದಾರೆ.