Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಯೋತ್ಪಾದನೆಯ ತೆಹ್ರೀಕ್ ಇ ಹುರಿಯತ್ ಸಂಘಟನೆ ನಿಷೇಧ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಸೇನೆ ಮೇಲೆ ಭೀಕರ ದಾಳಿ ನಡೆದಿದ್ದು. ಭಯೋತ್ಪಾದನೆ ಕೃತ್ಯ, ದೇಶ ವಿರೋಧಿ ಚಟುವಟಿಕೆ, ಪ್ರತ್ಯೇಕತಾವಾದದ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂಶಾಂತಿ ಸೃಷ್ಟಿಸುತ್ತಿದ್ದ ತಹ್ರೀಕ್ ಇ ಹುರಿಯತ್ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ನೆರವು ನೀಡುತ್ತಿರುವ ಇಸ್ಲಾಂ ಮೂಲಭೂತವಾದ, ಭಾರತ ವಿರೋಧಿ ಚಟುವಟಿಕೆ ಹಾಗೂ ಪಾಕಿಸ್ತಾನ ಪರ ಕೆಲಸ ಮಾಡುತ್ತಿದ್ದ ತೆಹ್ರೀಕ್ ಇ ಹುರಿಯತ್ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಕುರಿತು ಅಮಿತ್ ಶಾ ಟ್ವೀಟ್ ಮಾಡಿದ್ದು, ಭಯೋತ್ಪಾದನೆ ವಿಚಾರದಲ್ಲಿ ರಾಜಿಇಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

‘ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಡ್ಡಿಪಡಿಸುವವರಿಗೆ ಮೋದಿ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಪಾಠವಾಗಲಿದೆ. ಜಮ್ಮುಕಾಶ್ಮೀರದ ಮುಸ್ಲಿಂ ಲೀಗ್‌ ಕಾನೂನು ಬಾಹಿರ ಸಂಘಟನೆ ಎಂದು ಗುರುತಿಸಲಾಗಿದ್ದು, ಇದನ್ನು ನಿಷೇಧಿಸಲಾಗಿದೆ’ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ