Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತೀಯ ವಾಯುಪಡೆಯ ಲಘು ವಿಮಾನ ಪತನ-ಓರ್ವ ಸಾವು

ತೆಲಂಗಾಣ: ಲಘು ವಿಮಾನವೊಂದು ಪತನಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ತೆಲಂಗಾಣದ ಮೆದಕ್​ ಎಂಬಲ್ಲಿ ನಡೆದಿದೆ.

ಮೆದಕ್​ನ ತೂಪ್ರಾನ್ ಬಳಿ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದ್ದು, ತರಬೇತಿ ನಿರತ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದ ಕುರಿತು ಮಾಹಿತಿ ಲಭ್ಯವಾಗಿದೆ. ದುಂಡಿಗಲ್​​ ಏರ್​​ಪೋರ್ಟ್​ಗೆ ಸೇರಿದ ತರಬೇತಿ ನಿರತ ವಿಮಾನ ಇದಾಗಿದೆ.

ವಿಮಾನ ಪತನಗೊಂಡಾಗ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ವಿಮಾನ ಸಂಪೂರ್ಣ ಸುಟ್ಟು ಬೂದಿಯಾಗಿದೆ.

ಇನ್ನೂ ಈ ವಿಮಾನ ಪತನದ ದುರಂತದಲ್ಲಿ ಓರ್ವ ಪೈಲಟ್ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಇನ್ನೊಬ್ಬ ಪೈಲಟ್ ಬಗ್ಗೆ ಮಾಹಿತಿ ಲಭಿಸದ ಹಿನ್ನೆಲೆ ಆತ ವಿಮಾನದಿಂದ ಜಿಗಿದಿದ್ದಾರೆಯೇ ಎಂಬುದು ಪೊಲೀಸರಿಗೆ ಖಚಿತ ಮಾಹಿತಿ ದೊರೆತಿಲ್ಲ.