Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಕ್ಕಳಲ್ಲಿ ಪದೇ ಪದೆ ಜ್ವರದ ಸಮಸ್ಯೆಕಾಡುತ್ತದೆಯೇ.? ಹಾಗಾದ್ರೆ ಮನೆಯ ಮದ್ದು ಟಿಪ್ಸ್.!

 

ಬೆಂಗಳೂರು: ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಜ್ವರದ ಸಮಸ್ಯೆ ಕಾಡುತ್ತದೆ. ಆಗ ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಅವರು ಜ್ವರಕ್ಕೆ ಆಂಟಿಬಯೋಟಿಕ್ ನೀಡುತ್ತಾರೆ. ಇದರಿಂದ ಮಗುವಿಗೆ ದೀರ್ಘಕಾಲದ ಸಮಸ್ಯೆ ಕಾಡುವ ಸಂಭವವಿರುತ್ತದೆ. ಹಾಗಾಗಿ ಈ ಆಂಟಿಬಯೋಟಿಕ್ ನ್ನು ಬಳಸುವ ಬದಲು ಈ ಮನೆಮದ್ದನ್ನು ಬಳಸಿ.

ಸಾಸಿವೆ ಎಣ್ಣೆ ಬಿಸಿ ಮಾಡಿ ಅದಕ್ಕೆ 2-3 ಬೆಳ್ಳುಳ್ಳಿ, ಲವಂಗ, ಓಂಕಾಳನ್ನು ಸೇರಿಸಿ ಇದನ್ನು ಮಗುವಿನ ಕಾಲು ಬೆನ್ನು ಮತ್ತು ಎದೆಗೆ ಉಜ್ಜಿ.

ಶುಂಠಿ ರಸಕ್ಕೆ ಜೇನುತುಪ್ಪ ಸೇರಿಸಿ ಮಗುವಿಗೆ ಕುಡಿಯಲು ನೀಡಿ.

ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಸಿ. ಇದರಿಂದ ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಮೂತ್ರದ ಮೂಲಕ ಹೊರಹೋಗುತ್ತವೆ.

ನೀರಿಗೆ ಉಪ್ಪು ಮಿಕ್ಸ್ ಮಾಡಿ ಬಾಯನ್ನು ಮುಕ್ಕಳಿಸಿ. ಇದರಿಂದ ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತದೆ.

ಜ್ವರ ಅತೀಯಾಗಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ.