Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಗು ಅಳುವ ಕಾರಣಕ್ಕೆ ಬಾಣಂತಿಯ ಕೊಂದು ಕಥೆ ಕಟ್ಟಿದ ಕಿರಾತಕ..!

ರಾಯಚೂರು : ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಆಕೆಯನ್ನು ಆತ ಮದುವೆಯಾಗಿದ್ದನಾದ್ರೂ ಕೊನೆಗೆ ಆ ಪ್ರಾಣವನ್ನೇ ತೆಗೆದಿದ್ದ ಆ ಕಿರಾತಕ. ಸಿಸೇರಿಯನ್ ನೋವಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಕಥೆ ಕಟ್ಟಿ ಇದೀಗ ಪೊಲೀಸ್ ಅಥಿತಿಯಾಗಿದ್ದಾನೆ.

ರಾಯಚೂರಿನ ಸಂತೋಷ ಸರೋವರ ಅನ್ನೊ ಹೊಟೆಲ್ ಕಂ ಲಾಡ್ಜ್ ನ ರೂಂ ನಂಬರ್ 103 ರಲ್ಲಿ ಮಹಿಳೆ ಸಾವನ್ನಪ್ಪಿದ್ದು , ಸೋನಿ ಅನ್ನೋ‌ 23 ವರ್ಷದ ಬಾಣಂತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಪಶ್ಚಿಮ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.. ಈ ವೇಳೆ ಮೃತ ಸೋನಿ ಮೃತದೇಹ ಕೆಳಗಿತ್ತು. ಆಕೆಯ ಪತಿ ಅವಿನಾಶ್, ಆಕೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ನಂಬಿಸಿದ್ದ. ಆದ್ರೆ ಪೊಲೀಸರಿಗೆ ಅನುಮಾನ ಕಾಡಿತ್ತು. ಇದಷ್ಟೆ ಅಲ್ಲದೇ ಮೃತ ಸೋನಿ ಕಳೆದ 20 ದಿನಗಳ ಹಿಂದಷ್ಟೆ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆ ನೋವನ್ನ ತಾಳಲಾರದೇ ಬಳಲುತ್ತಿದ್ದ ಪತ್ನಿ ಸೋನಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ನಂಬಿಸಿ ಪತಿ ಕಥೆ ಕಟ್ಟಿದ್ದ. ಆದ್ರೆ ಪಶ್ಚಿಮ ಠಾಣಾ ಪೊಲೀಸರು ತನಿಖೆ ನಡೆಸಿ, ಘೋರ ಸತ್ಯವನ್ನು ಬಟಾಬಯಲು ಮಾಡಿದ್ದಾರೆ.ಅದು ಆತ್ಮಹತ್ಯೆ ರೀತಿ ಇರ್ಲಿಲ್ಲ. ಜೊತೆಗೆ ಪತಿ ಅವಿನಾಶ್ ಹೇಳಿದಂತೆ ಘಟನೆ ನಡೆದಿರಲಿಲ್ಲ. ಅದು ಕೊಲೆ ಅನ್ನೋದಕ್ಕೆ ಪುರಾವೆಗಳು ಸಿಕ್ಕಿದ್ದವು. ಮುಂದೆ ಪೊಲೀಸರು ಬೆಂಡೆತ್ತಿದಾಗ ಪತ್ನಿ ಸೋನು ಕೊಲೆ ಮಾಡಿದ್ದ ಸತ್ಯ ಬಾಯ್ಬಿಟ್ಟಿದ್ದ. ಮೂಲತಃ ಉತ್ತರ ಪ್ರದೇಶದವರಾಗಿದ್ದ ಅವಿನಾಶ್, ಅದೇ ಭಾಗದ ಸೋನಿ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ‌.ಈ ಮದುವೆ ಇಷ್ಟವಿರದ ಹಿನ್ನೆಲೆ ಕುಟುಂಬಸ್ಥರಿಂದ ದೂರವಾಗಿ ಆತ ರಾಯಚೂರಿಗೆ ಬಂದು ನೆಲೆಸಿದ್ದ. ಇಲ್ಲಿ ಸಂತೋಷ ಸರೋವರ ಅನ್ನೋ ಲಾಡ್ಜ್ ಕಂ ಹೊಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಪತ್ನಿ ಈತನಿಗೆ ಕೆಲಸದಲ್ಲಿ ಸಹಾಯಕವಾಗಿದ್ದಳು. 20 ದಿನಗಳ ಹಿಂದೆ ಸಿಸೆರಿಯನ್ ಮೂಲಕ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ಲು.. ಆದ್ರೆ ಹೆರಿಗೆ ಬಳಿಕ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಳು.. ಹೀಗಾಗಿ ಹಸುಗೂಸಿಗೆ ಕಾಲಕಾಲಕ್ಕೆ ಹಾಲುಣಿಲು‌ ಆಕೆಗೆ ಆಗುತ್ತಿರ್ಲಿಲ್ಲ.. ಹೀಗಾಗಿ ಮಗು ಸದಾ ಅಳೋಕೆ ಶುರು ಮಾಡಿತ್ತು.ಒಂದು ಕಡೆ ಮಗುವನ್ನ ಸಂಭಾಳಿಸಲಾಗದ ಸ್ಥಿತಿ ಮತ್ತೊಂದು ಕಡೆ ತನ್ನ ಅನಾರೋಗ್ಯ ಸರಿಪಡಿಸಿಕೊಳ್ಳಲಾಗಿರ್ಲಿಲ್ಲ.. ಮಧ್ಯೆ ಮಗು ಅಳೋವಾಗ ಪತಿ ಅವಿನಾಶ್ ಸಮಾಧಾನ ಪಡಿಸಬೇಕಿತ್ತು.. ಇದರಿಂದ ಬೇಸತ್ತು ನಿತ್ಯ ಬಾಣಂತಿ ಪತ್ನಿ ಜೊತೆ ಜಗಳವಾಡ್ತಿದ್ದ.. ಅದರಂತೆ ಡಿಸೆಂಬರ್12 ರಂದು ಪತ್ನಿಯನ್ನು ಕೊಂದು ಬೆಳಗಿನ ಜಾವದ ವರೆಗೂ ಆಕೆ ಹೆಣದ ಜೊತೆಯೇ ಪಾಪಿ ಪತಿ ಕಾಲ ಕಳೆದಿದ್ದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆತ ಬಿಂಬಿಸಿದ್ದ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ ಎಂದು ನಿಖಿಲ್. ಬಿ, ರಾಯಚೂರು ಎಸ್ ಪಿ ಮಾಹಿತಿ ನೀಡಿದ್ದಾರೆ.