Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಣಿಪುರದಲ್ಲಿ ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ

ಇಂಫಾಲ: ಮಣಿಪುರ ಪೊಲೀಸರು ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಕಾಳಗ ನಡೆದಿರುವ ಘಟನೆ ನಡೆದಿದೆ.

ಭದ್ರತಾ ಪಡೆಗಳು ಮೋರೆ ಪಟ್ಟಣದ ಕೆಲವು ಪ್ರದೇಶಗಳ ಮೂಲಕ ಸಾಗುತ್ತಿದ್ದಾಗ ಉಗ್ರರು ಅವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದರು.

ಇನ್ನು ಈ ವೇಳೆ ಅವರು ಮಾರ್ಟರ್ ಶೆಲ್ ಗಳನ್ನು ಬಳಸಿದ್ದು, ಎರಡು ಕಡೆಗಳಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.