ಮಸಾಜ್ ಮಾಡಿಸಿಕೊಳ್ಳುತ್ತಲೇ ಸಭೆಗೆ ಹಾಜರಾದ ಏರ್ ಏಷ್ಯಾ ಸಿಇಒ – ನೆಟ್ಟಿಗರು ಫುಲ್ ಗರಂ
ಮಲೇಷಿಯಾದ ಏರ್ಏಷಿಯಾ ಸಿಇಒ ಟೋನಿ ಫೆರ್ನಾಂಡಿಸ್ ಅವರು ಮಸಾಜ್ ಮಾಡಿಸಿಕೊಳ್ಳುತ್ತಲೇ ಸಭೆಗೆ ಹಾಜರಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೋನಿ ಫೆರ್ನಾಂಡಿಸ್ ಅವರು ವರ್ಚುವಲ್ ಮೀಟಿಂಗ್ನಲ್ಲಿ ಭಾಗವಹಿಸುವಾಗ ಕುರ್ಚಿಯ ಮೇಲೆ ಅಂಗಿ ಧರಿಸದೆ ಕುಳಿತು ಮಸಾಜ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಲಿಂಕ್ಡ್ಇನ್ನಲ್ಲಿ ಅಕ್ಟೋಬರ್ 16ರಂದು ಪೋಸ್ಟ್ ಅನ್ನು ಹಂಚಿಕೊಂಡ ಫೆರ್ನಾಂಡಿಸ್, ಇಂಡೋನೇಷ್ಯಾ ಮತ್ತು ಏರ್ಏಷ್ಯಾದ ಸಂಸ್ಕೃತಿಯನ್ನು ಉತ್ತಮವಾಗಿದೆ. ಅದು ಮಸಾಜ್ ಮಾಡಲು ಮತ್ತು ಏಕಕಾಲದಲ್ಲಿ ಮ್ಯಾನೇಜ್ಮೆಂಟ್ ಸಭೆಯನ್ನು ಮಾಡಲು ಅನುವು ಮಾಡಿಕೊಡುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ