Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೀನುಗಾರಿಕೆ ಸಲಕರಣೆ ಕಿಟ್: ಅರ್ಜಿ ಆಹ್ವಾನ

 

ಚಿತ್ರದುರ್ಗ:ಜಿಲ್ಲೆಯ ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ಗಣಿಬಾಧಿತ ಜಿಲ್ಲೆಗಳ ಸಮಗ್ರ ಅಭಿವೃದ್ದಿ ಯೋಜನೆಯಡಿ (CEPMIZ)  2023-24 ನೇ ಸಾಲಿಗೆ ಸಂಬಂಧಿಸಿದಂತೆ ಮೀನುಗಾರಿಕೆ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಶೇ.100ರಷ್ಟು ಸಹಾಯಧನದಲ್ಲಿ  ಮೀನುಗಾರಿಕೆ ಸಲಕರಣೆ ಯೋಜನೆಯಡಿ ಆಸಕ್ತ ಮೀನುಗಾರ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 20 ಕೊನೆ ದಿನವಾಗಿದೆ.

ಈ ಯೋಜನೆಗೆ ಹೊಳಲ್ಕೆರೆ ತಾಲ್ಲೂಕಿನ ತನಿಗೇನಹಳ್ಳಿ, ಹಿರೇಕಂದವಾಡಿ, ಮುತ್ತುಗದೂರು, ಕಾಗಳಕೆರೆ, ಬಿ.ದುರ್ಗ, ಸಾಸಲು, ಗಂಜಿಗಟ್ಟಿ, ಊದಿಗೆರೆ, ಹೊರಕೆರೆನಹಳ್ಳಿ, ತ್ಯಾಗನಹಳ್ಳಿ, ಶಾನಬೋಗನಹಳ್ಳಿ ಗ್ರಾಮಗಳು ಹಾಗೂ ಹೊಸದುರ್ಗ ತಾಲ್ಲೂಕಿನ ದೊಡ್ಡಬ್ಯಾಲದಕೆರೆ, ಚಿಕ್ಕಬ್ಯಾಲದಕೆರೆ, ಬ್ಯಾಡರಹಳ್ಳಿ, ಜಯಸುವರ್ಣಪುರ, ಕಿಟ್ಟದಾಳ್, ನಾಗನಾಯಕನಕಟ್ಟೆ, ಮುಗುಲೋಡು, ಕಂಚೀಪುರ, ಲಕ್ಕಿಹಳ್ಳಿ, ಸಂಪನಾಯಕನಹಳ್ಳಿ, ಹನುಮನಹಳ್ಳಿ, ದೊಡ್ಡಕಿಟ್ಟದಾಳ್, ನಾಕಿಕೆರೆ, ಮಾಡದಕೆರೆ, ವೀರವ್ವನಾಗ್ತಿಹಳ್ಳಿ, ಶೀರನಕಟ್ಟೆ, ಬಂಡಿಹಳ್ಳಿ, ಸಣ್ಣಕಿಟ್ಟದಾಳ್ ಮತ್ತು ಕಂಚಿಹಳ್ಳಿ  ಗ್ರಾಮಗಳಿಗೆ ಸಂಬಂಧಿಸಿದ ಸಾರ್ವಜನಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕಿನ  ಮೀನಿಗಾರಿಕೆ ಸಹಾಯಕ ನಿರ್ದೇಶಕರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ  ಮಾಹಿತಿಯನ್ನು ಪಡೆಯಬಹುದು ಎಂದು ಹೊಸದುರ್ಗ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.