Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೊಸರು ಹಾಳಾಗಿದೆ ಎಂದು ಎಸೆಯುತ್ತೀರಾ? ಮುಖಕ್ಕೆ ಫೇಸ್‌ಪ್ಯಾಕ್‌ ರೀತಿ ಬಳಸಿ

ಮೊಸರನ್ನು ಅವಧಿಗಿಂತ ಹೆಚ್ಚು ಸಮಯ ಇಟ್ಟಲ್ಲಿ ಅದು ಹೆಚ್ಚು ಹುಳಿಯಾಗಿಬಿಡುತ್ತದೆ. ಸೇವಿಸಲು ಯೋಗ್ಯವಿರದ ಕಾರಣ ಬಹುತೇಕ ಮಂದಿ ಮೊಸರನ್ನು ಎಸೆಯುತ್ತಾರೆ.

ಆದರೆ, ಮೊಸರನ್ನು ಎಸೆಯುವ ಬದಲು ಮುಖಕ್ಕೆ ಫೇಸ್‌ಪ್ಯಾಕ್‌ ರೀತಿ ಬಳಸಿ. ಮೊಸರಿಗೆ 1 ಚಮಚ ಅರಶಿಣ, 1 ಚಮಚ ಜೇನುತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನು ಮೇಕಪ್‌ ಬ್ರಶ್‌ನಿಂದ ಮುಖಕ್ಕೆ ಲೇಪಿಸಿಕೊಳ್ಳಿ. ಒಣಗುವವರೆಗೂ ಹಾಗೇ ಇಟ್ಟುಕೊಳ್ಳಿ. ನಂತರ ನೀರಿನಿಂದ ತೊಳೆಯಿರಿ ಇದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.