Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು’- ವೀರಪ್ಪ ಮೊಯ್ಲಿ ವಿವಾದಾತ್ಮಕ ಹೇಳಿಕೆ

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಟೆ ಸಂದರ್ಭದಲ್ಲಿ ‘ಗರ್ಭಗುಡಿ’ಗೆ ಬಿಡಬಾರದಿತ್ತು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ನಿಜವಾದ ಬ್ರಾಹ್ಮಣರು-ಸ್ವಾಮೀಜಿಗಳು ಆಗಿದ್ರೆ ಅವರು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು ಎಂದು ಹೇಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ನರೇಂದ್ರ ಮೋದಿ ಗರ್ಭಗುಡಿಗೆ ಪ್ರವೇಶ ಮಾಡಿದ್ದೇ ತಪ್ಪು, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಸಹ ತಪ್ಪು, ನಿಜವಾದ ಸ್ವಾಮೀಜಿಗಳು, ಬ್ರಾಹ್ಮಣರು ಆಗಿದ್ರೆ ನರೇಂದ್ರ ಮೋದಿಯನ್ನ ಗರ್ಭಗುಡಿ ಒಳಗೆ ಬಿಡುತ್ತಿರಲಿಲ್ಲ, ರಾಮಮಂದಿರ ಅಪೂರ್ಣ ಮಂದಿರವಾಗಿದೆ. ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮಾಡಿದ್ರೆ ಸಾಲದು. ಅಲ್ಲಿ ರಾಮ ಲಕ್ಷಣ, ಸೀತಾ ಹಾಗೂ ಆಂಜನೇಯನ ವಿಗ್ರಹಗಳು ಇರಬೇಕು ಆಗಲೇ ರಾಮಮಂದಿರ ಪೂರ್ಣ ಎಂದು ವಾಗ್ದಾಳಿ ನಡೆಸಿದ್ದಾರೆ.