Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯೆಮೆನ್ ನಲ್ಲಿ ಇರಾನ್ ಬೆಂಬಲಿತ ‘ಹೌದಿ’ ನೆಲೆಗಳ ಮೇಲೆ ಅಮೇರಿಕಾ, ಬ್ರಿಟನ್ ದಾಳಿ

ವಾಷಿಂಗ್ಟನ್: ಇರಾನ್ ಮೂಲದ ಹೌದಿ ಬಂಡುಕೋರರ ಗುಂಪು ಪದೇ ಪದೇ ಹಡಗುಗಳ ಮೇಲೆ ದಾಳಿ ನಡೆಸುವ ಮೂಲಕ ಜಾಗತಿಕ ವ್ಯಾಪಾರಕ್ಕೆ ಧಕ್ಕೆ ತರುತ್ತಿದೆ. ಈ ನಿಟ್ಟಿನಲ್ಲಿ ಬಂಡುಕೋರರನ್ನು ಮಟ್ಟಹಾಕುವ ಸಲುವಾಗಿ ಅಮೆರಿಕ ಹಾಗೂ ಬ್ರಿಟನ್ ಫೆ 3 ರಂದು ಯೆಮನ್ ನಲ್ಲಿ 36 ಹೌದಿ ಶಿಬಿರಗಳನ್ನು ಗುರಿ ಮಾಡಿ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಉಭಯ ರಾಷ್ಟಗಳು ಅಧಿಕಾರಿಗಳು, “ಅಂತಾರಾಷ್ಟ್ರೀಯ ಹಾಗೂ ವಾಣಿಜ್ಯ ಶಿಪ್ಪಿಂಗ್ ನೌಕೆಗಳ ಮೇಲೆ ಹೌದಿಗಳು ಕೆಂಪು ಸಮುದ್ರ ದಾಟುವ ವೇಳೆ ನಡೆಸುವ ದಾಳಿಗೆ ಪ್ರತಿಯಾಗಿ, ಯೆಮನ್ ನ 13 ಕಡೆಗಳಲ್ಲಿ 36 ಹೌದಿ ನೆಲೆಗಳನ್ನು ಗುರಿಮಾಡಿಕೊಂಡು ಅಮೆರಿಕ ಹಾಗೂ ಬ್ರಿಟನ್ ನ ಸೇನೆಗಳು ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.

ಇನ್ನು ಜಾಗತಿಕ ವ್ಯಾಪಾರಕ್ಕೆ ಅಪಾಯ ಪಡಿಸುತ್ತಿರುವ ಹಾಗೂ ಅಮಾಯಕ ಸಮುದ್ರಯಾನಿಗಳ ಜೀವಕ್ಕೆ ಪ್ರಾಣಾಪಾಯ ಒಡ್ಡಿರುವ ಹೌದಿಗಳ ಬಲವನ್ನು ಕಡಿಮೆ ಮಾಡಲು ಈ ನಿಖರ ದಾಳಿ ನಡೆಸಲಾಗಿದೆ. ಇದರೊಂದಿಗೆ ಕ್ಷಿಪಣಿ ವ್ಯವಸ್ಥೆ, ಉಡಾವಣೆ ವ್ಯವಸ್ಥೆ ಮೇಲೆ, ವಾಯು ರಕ್ಷಣಾ ವ್ಯವಸ್ಥೆ ಮತ್ತು ರಾಡಾರ್ ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವ ವ್ಯವಸ್ಥೆ ಮೇಲೆ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.