Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜ್ಯಸಭೆ ಚುನಾವಣೆ: ಪಾಕಿಸ್ತಾನ ಜಿಂದಾಬಾದ್ ಎಂದು ಯಾರು ಕೂಗಿಲ್ಲ.!

 

ಚಿತ್ರದುರ್ಗ : ವಿಧಾನಸೌಧದಲ್ಲಿ ನಡೆದ ರಾಜ್ಯಸಭೆ ಚುನಾವಣೆಯ ನಂತರ ಡಾ.ಸೈಯದ್ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಯಾರು ಸಹಾ ಕೂಗಿಲ್ಲ ಅವರು ಕೂಗಿದ್ದು ಸಾಸಿರ್ ಜಿಂದಾಬಾದ್, ಕಾಂಗ್ರೆಸ್ ಜಿಂದಾಬಾದ್ ಎಂದು ಇದಕ್ಕೆ ನಾನೇ ಸಾಕ್ಷಿ ಎಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಸ್ಪಷ್ಟಪಡಿಸಿದ್ದಾರೆ.

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನೆ ನಾನು ಸಹಾ ಈ ಘಟನೆ ನಡೆದಾಗ ಅಲ್ಲಿದ್ದೆ ಅಲ್ಲಿ ಯಾರೂ ಸಹಾ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ, ಅವರು ಕೂಗಿದ್ದು ಸಾಸಿರ್ ಜಿಂದಾಬಾದ್, ಮಹಮ್ಮದ್ ಜಿಂದಾಬಾದ್, ಕಾಂಗ್ರೆಸ್ ಜಿಂದಾಬಾದ್ ಎಂದು ಕೂಗಿದ್ದಾರೆ. ಬಿಜೆಪಿಯವರು ಸುಮ್ಮನೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ ಎಂದು ಹೇಳುವುದರ ಮೂಲಕ ರಾಜ್ಯದಲ್ಲಿ ಆಶಾಂತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಇಂದು ಖಂಡನೀಯ ಎಂದರು.

ನಾಸಿರ್ ಹುಸೇನ್ ರವರು ತುರುವನೂರಿನವರಾಗಿದ್ದು ಅವರ ವಂಶಸ್ಥರು ಸ್ವಾತಂತ್ರ್ಯ ಹೋರಾಟದಲ್ಲಿ ಬಾಗಿಯಾಗಿದ್ದವರು ಇವರು ಸಹಾ ಉತ್ತಮ ವ್ಯಕ್ತಿಗಳಾಗಿದ್ದಾರೆ. ಪಿ.ಎಚ್.ಡಿ.ಯನ್ನು ಪಡೆದಿರುವ ವಿದ್ಯಾವಂತರಾಗಿದ್ದಾರೆ. ಅವರು ಹೇಗೆ ಎಂದು ನನಗೆ ಗೊತ್ತಿದೆ. ನಾನು ಸಹಾ ಅವರ ಒಡನಾಡಿಯಾಗಿದ್ದೇನೆ, ಇದರಿಂದ ಅವರು ಈ ರೀತಿಯಾದ ಕೆಲಸಗಳಿಗೆ ಬೆಂಬಲ ನೀಡುವುದಿಲ್ಲ ಅಲ್ಲಿ ಕೂಗಿದ್ದು ಅವರಿಗೆ ಜಿಂದಾಬಾದ್ ಎಂದು ಆದರೆ ಇದನ್ನು ಬೇರೆಯವರು ತಿರುಚಿದ್ದಾರೆ ಎಂದು ತಿಳಿಸಿದರು.

ಈ ವಿಷಯವನ್ನು ಹಿಡಿದು ಕೊಂಡು ಬಿಜೆಪಿ ನಿನ್ನೆ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿರುವುದು ಖಂಡನೀಯ ಇದರ ಬಗ್ಗೆ ಸತ್ಯಾಸತ್ಯವನ್ನು ತಿಳಿದು ನಂತರ ಮುಂದುವರೆಯಬೇಕಿತ್ತು ಆದರೆ ಅದನ್ನು ಮಾಡದೇ ಆತುರವಾಗಿ ನಮ್ಮ ಕಚೇರಿಯ ಮುಂದೆ ಪ್ರತಿಭಟನೆಯನ್ನು ಮಾಡಿರುವುದು ಸರಿಯಲ್ಲ ಎಂದ ಅವರು, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದರ ಬಗ್ಗೆ ಸಾಕ್ಷಿಯನ್ನು ತೋರಿಸುವುದರೆ ಅವರಿಗೆ ಶಿಕ್ಷೆಯನ್ನು ಕೂಡಿಸಿ ನಾಸಿರ್ ರವರು ಪತ್ರಕರ್ತರ ಬಗ್ಗೆ ಮಾತನಾಡಿರುವುದು ಸಹಾ ಅವರು ಒತ್ತಡದಲ್ಲಿ ಇದ್ದಾಗ ಬಂದ ಮಾತುಗಳಾಗಿವೆ ಸಮಾದಾನವಾಗಿ ಪ್ರಶ್ನಿಸಿದರೆ ಈ ರೀತಿಯಾದ ಮಾತುಗಳು ಕೇಳಿ ಬರುತ್ತಿರಲಿಲ್ಲ ಎಂದು ತಾಜ್ಪೀರ್ ಸ್ಪಷ್ಟಪಡಿಸಿದರು.

ಸರ್ಕಾರ ನನ್ನನ್ನು ಚಿತ್ರದುರ್ಗ ನಗರಾಭೀವೃಧ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷನಾಗಿ ನೇಮಕ ಮಾಡಿದ್ದು ನನಗೆ ಬಯಸದೇ ಬಂದ ಭಾಗ್ಯವಾಗಿದೆ. ಯಾವಾಗ ಅಧ್ಯಕ್ಷರಾಗಿ ಅಧಿಕಾರವನ್ನು ಪಡೆಯಬೇಕೆಂಬುದನ್ನು ಪಕ್ಷದ ವರಿಷ್ಟರ ಬಳಿ ಮಾತನಾಡಿ ಅಧಿಕಾರವನ್ನು ಪಡೆಯುವುದಾಗಿ ತಿಳಿಸಿದರು.

ಗೋಷ್ಟಿಯಲ್ಲಿ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಮೈಲಾರಪ್ಪ, ಸಂಪತ್ ಕುಮಾರ್, ಪ್ರಸನ್ನ, ಲಕ್ಷ್ಮೀಕಾಂತ್, ಮುದಸಿರ್, ಸೇರಿದಂತೆ ಇತರರು ಭಾಗವಹಿಸಿದ್ದರು.