Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣ ಎನ್‌ಐಎಗೆ ವರ್ಗಾವಣೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದೆ. ಗೃಹ ಸಚಿವಾಲಯ (ಎಂಎಚ್‌ಎ) ಸೋಮವಾರ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದೆ. ಸೋಮವಾರ ಮಧ್ಯಾಹ್ನ ಎನ್‌ಐಎ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿದ್ದಾರೆ ಎನ್‌ಐಎ ಇಂದಿನಿಂದ ಸ್ಫೋಟದ ಸಂಪೂರ್ಣ ತನಿಖೆ ಆರಂಭಿಸಲಿದೆ.

ಬ್ರೂಕ್‌ಫೀಲ್ಡ್ ಔಟ್‌ಲೆಟ್‌ನಲ್ಲಿ ರಾಮೇಶ್ವರಂ ಕೆಫೆಯ ಶುಕ್ರವಾರ ಮಾರ್ಚ್ 1 ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಘಟನೆಗೆ ಕಾರಣರಾದವರನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದು ಕರ್ನಾಟಕ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿತು. ಆದರೆ ಉಗ್ರರ ಕರಿನೆರಳು
ಪ್ರಕರಣದಲ್ಲಿ ಕಂಡುಬಂದ ಬಳಿಕ ಕೇಂದ್ರ ಅಪರಾಧ ವಿಭಾಗ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಗೊಂಡಿತ್ತು.

ಗೃಹ ಸಚಿವಾಲಯ ಇದೀಗ ಪ್ರಕರಣದ ಗಂಭೀರತೆ ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಹಸ್ತಾಂತರಿಸಿದೆ, ದೇಶದ ಒಳಗಡೆ ಯಾವುದೇ ಉಗ್ರ ಚಟುವಟಿಕೆ, ಬಾಂಬ್‌ ಸ್ಫೋಟದ ತನಿಖೆಯನ್ನು ಎನ್‌ಐಎ ವಹಿಸಿಕೊಳ್ಳುತ್ತದೆ. ಈ ಹಿಂದೆ ಬೇರೆ ರಾಜ್ಯದಲ್ಲಿ ಹಲವು ಪ್ರಕರಣಗಳಿಗೆ ಈ ಹೊಸ ಪ್ರಕರಣದ ಸಾಮ್ಯತೆ ಕಂಡು ಹಿಡಿದು ಈ ಪ್ರಕರಣಗಳನ್ನು ಬೇಧಿಸುತ್ತದೆ.