Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರುಚಿಕರವಾದ ಮೆಂತ್ಯ ರೈಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು…

  • ಹೆಚ್ಚಿದ ಮೆಂತ್ಯೆ ಸೊಪ್ಪು- 1 ಬಟ್ಟಲು
  • ಈರುಳ್ಳಿ- 1 ದೊಡ್ಡದು 1 (ಉದ್ದನೆ ಹೆಚ್ಚಿದ್ದು)
  • ಶುಂಠಿ, ಬೆಳುಳ್ಳಿ ಪೇಸ್ಟ್ – 1 ಚಮಚ,
  • ಟೊಮ್ಯಾಟೋ- 2
  • ಬೆಚ್ಚನೆ ಹುರಿದು ಪುಡಿ ಮಾಡಿದ ದನಿಯಾ- 1 ಚಮಚ
  • ಖಾರದ ಪುಡಿ- 1 ಚಮಚ
  • ಜೀರಿಗೆ ಪುಡಿ-ಒಂದೂವರೆ ಚಮಚ
  • ಬಟಾಣಿ 1 ಬಟ್ಟಲು
  • ಅಕ್ಕಿ 1 ಪಾವು
  • ನೀರು-2 1/2 ಲೋಟ

ಮಾಡುವ ವಿಧಾನ…

  • ಮೊದಲು ಕುಕ್ಕರಿನಲ್ಲಿ ಎಣ್ಣೆ ಹಾಕಿ ಈರುಳ್ಳಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿದು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಸಮಯದ ನಂತರ ಮೆಂತ್ಯೆ ಸೊಪ್ಪು, ಬಟಾಣಿ ಹಾಕಿ 3 ನಿಮಿಷ ಬಾಡಿಸಿ ಟೊಮ್ಯಾಟೋ ಸೇರಿಸಿ.
  • ಜೀರಿಗೆ, ದನಿಯಾ ಪುಡಿ, ಅರಿಶಿನ, ಅಚ್ಚಖಾರದ ಪುಡಿ, ಉಪ್ಪು, ಅಕ್ಕಿಯನ್ನು ಹಾಕಿ, ನೀರನ್ನು ಸೇರಿಸಿ ಮುಚ್ಚಳ ಮುಚ್ಚಿ. ಕುಕ್ಕರ್ 2 ವಿಷಲ್ ಹಾಕಿದಾಗ ತೆಗೆಯಿರಿ. ಬಿಸಿ ಬಿಸಿ ಮೆಂತ್ಯೆ ರೈಸ್ ಸವಿಯಲು ಸಿದ್ಧ.