Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಎಷ್ಟು ಹಣ  ಖರ್ಚು ಮಾಡಬೇಕು.?

 

ಬೆಂಗಳೂರು:  ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಚುನಾವಣೆ ವೆಚ್ಚ ಗರಿಷ್ಠ ರೂ.95 ಲಕ್ಷಗಳನ್ನು ಮೀರುವಂತಿಲ್ಲ!.

ಚುನಾವಣಾ ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಮತದಾನ ಎಣಿಕೆ ಮುಗಿಯುವ ತನಕ ಆದಂತಹ ಎಲ್ಲಾ ವೆಚ್ಚಗಳನ್ನು ಸಲ್ಲಿಸುವುದು ಅಭ್ಯರ್ಥಿಗಳು ಕರ್ತವ್ಯವಾಗಿದೆ. ಪ್ರತಿ ಅಭ್ಯರ್ಥಿಯ ಚುನಾವಣೆ ವೆಚ್ಚವನ್ನು ಗರಿಷ್ಠ ರೂ.95 ಲಕ್ಷಗಳಿಗೆ ಮಿತಿಗೊಳಿಸಲಾಗಿದೆ. ಅಭ್ಯರ್ಥಿಯು ಈ ಹಣದ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಬೇಕು. ಚುನಾವಣೆ ವೆಚ್ಚಗಳನ್ನು ಬ್ಯಾಂಕ್ ಮೂಲಕವೇ ಪಾವತಿಸಬೇಕು. ಅಭ್ಯರ್ಥಿಗಳು ಕೈಗೊಳ್ಳುವ ಚುನಾವಣೆ ಪ್ರಚಾರ, ಬಳಸುವ ವಾಹನ, ಬಿತ್ತಿ ಪತ್ರಗಳು, ಸಭೆ, ಸಮಾರಂಭ, ಸ್ಟಾರ್ ಪ್ರಚಾರಕರು. ಸಭೆಯ ವೇದಿಕೆ, ಊಟ ಉಪಹಾರದ ಸೇರಿದಂತೆ ಇತರೆ ಎಲ್ಲಾ ವೆಚ್ಚಗಳನ್ನು ಚಿತ್ರಿಕರಿಸಿ ಕಳಿಸಿರುವ ಮಾಹಿತಿ ಆಧಾರದ ಮೇಲೆ ದಾಖಲಿಸಬೇಕು. ಅಭ್ಯರ್ಥಿಗಳು ಚುನಾವಣೆ ವೆಚ್ಚದ ಮಾಹಿತಿಯನ್ನು ಕಾಲಕಾಲಕ್ಕೆ ಚುನಾವಣೆ ವೆಚ್ಚ ಕೋಶಕ್ಕೆ ಸಲ್ಲಿಸಬೇಕಿದೆ.!