Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವನಿತಾ ಪ್ರೀಮಿಯರ್ ಲೀಗ್ ನಲ್ಲಿ 1.3 ಕೋಟಿಗೆ ವೃಂದಾ ದಿನೇಶ್ ಹರಾಜು

ಮುಂಬೈ:ಮುಂಬೈನಲ್ಲಿ ವನಿತಾ ಪ್ರೀಮಿಯರ್ ಲೀಗ್ ನ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಕರ್ನಾಟಕ ತಂಡದ ಬ್ಯಾಟರ್ ಆಗಿರುವ 21ವರ್ಷದ ವೃಂದಾ ದಿನೇಶ್ ಅವರು ಬರೋಬ್ಬರಿ 1.3 ಕೋಟಿ ರೂ ಬಾಚಿಕೊಂಡಿದ್ದಾರೆ.

ವೃಂದಾ ಅವರು ತನ್ನ ಅಗ್ರೆಸಿವ್ ಬ್ಯಾಟಿಂಗ್ ನಿಂದ ಹೆಸರು ಪಡೆದುಕೊಂಡವರು. ಇವರು ಆರಂಭದಲ್ಲಿ ಎಸಿಸಿ ಎಮರ್ಜಿಂಗ್ ಟೀಮ್ಸ್ ಕಪ್ ಗೆ ಆಯ್ಕೆಯಾಗಿರಲಿಲ್ಲ. ಆದರೆ ಎಸ್ ಯಶಸ್ರಿಗೆ ಬದಲಿಗೆ ತಂಡಕ್ಕೆ ಸೇರಿದ ಅವರು ಫೈನಲ್ ಪಂದ್ಯದಲ್ಲಿ ತಂಡದಲ್ಲಿ ಆಡಿದರು.

ಈ ಪಂದ್ಯದಲ್ಲಿ ಅವರು 29ಎಸೆತಗಳಲ್ಲಿ 36ರನ್ ಗಳಿಸಿದ್ದರು.
ಇನ್ನು ವೃಂದಾ ಅವರು ಇತ್ತೀಚೆಗಷ್ಟೇ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದರು. ಇಂಗ್ಲೆಂಡ್ ಎ ವಿರುದ್ಧದ ಸರಣಿಯಲ್ಲಿ ವೃಂದಾ ದಿನೇಶ್ ಭಾರತ ತಂಡದ ಭಾಗವಾಗಿದ್ದರು.

ಇಂದಿನ ಹರಾಜಿನಲ್ಲಿ ವೃಂದಾ ದಿನೇಶ್ ಅವರು ಬರೋಬ್ಬರಿ 1.3 ಕೋಟಿ ರೂ ಪಡೆದುಕೊಂಡರು.ಈ ಬಾರಿಯ ಡಬ್ಲ್ಯೂಪಿಎಲ್ ನಲ್ಲಿ ಅವರು ಯುಪಿ ವಾರಿಯರ್ಸ್ ತಂಡದ ಪರ ಆಡಲಿದ್ದಾರೆ.

ಅತಿ ಹೆಚ್ಚು ಹಣ ಪಡೆದ ಅನ್ ಕ್ಯಾಪ್ಡ್ ಆಟಗಾರ್ತಿ ಎಂಬ ದಾಖಲೆಯನ್ನೂ ಅವರು ಮುಡಿಗೇರಿಸಿಕೊಂಡಿದ್ದಾರೆ.ಆದರೆ ಕೆಲವೇ ಸಮಯಲ್ಲಿ 2ಕೋಟಿ ರೂ ಪಡೆದ ಕಶ್ವಿ ಗೌತಮ್ ಈ ದಾಖಲೆ ಮುರಿದರು.

ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಕರ್ನಾಟಕದ ತಂಡವು ಫೈನಲ್ ತಲುಪಲು ಅವರು ಪ್ರಮುಖ ಪಾತ್ರ ವಹಿಸಿದರು.11 ಇನ್ನಿಂಗ್ಸ್‌ ಗಳಲ್ಲಿ 47.70 ರ ಸರಾಸರಿಯಲ್ಲಿ 477 ರನ್ ಗಳಿಸಿದರು.ಅಲ್ಲದೆ ರಾಜಸ್ಥಾನ ವಿರುದ್ಧ 81 ರನ್‌ ಗಳನ್ನು ಇನ್ನಿಂಗ್ಸ್ ಆಡಿದ್ದರು.

ಈ ಹರಾಜು ಪ್ರಕ್ರಿಯೆಯಲ್ಲಿ ಕೆಲ ಘಟಾನುಘಟಿ ಅಂತಾರಾಷ್ಟ್ರೀಯ ಆಟಗಾರು ಯಾವುದೇ ಬಿಡ್ ಇರದೆ ನಿರಾಸೆ ಅನುಭವಿಸಿದರೆ, ಕೆಲ ಹೊಸ ಆಟಗಾರರು ಭಾರಿ ಬೇಡಿಕೆ ಪಡೆದುಕೊಂಡರು.