Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಧಾನಸೌಧದ ಮುಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ದಂಪತಿಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಜೆ.ಜೆ ನಗರದ ನಿವಾಸಿಗಳಾದ ಶಾಯಿಸ್ತಾ ದಂಪತಿಗಳು ವಿಧಾನಸೌಧದ ಮುಂಭಾಗಕ್ಕೆ ಬಂದಿದ್ದು, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಇಬ್ಬರಿಂದ ಸೀಮೆಎಣ್ಣೆಯನ್ನು ಕಿತ್ತುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಬ್ಯಾಂಕ್‌ನಿಂಧ ಸಾಲ ಪಡೆದುಕೊಂಡಿದ್ದ ದಂಪತಿಗಳು ಸಾಲವನ್ನು ತೀರಿಸಿದ ಹಿನ್ನಲೆಯಲ್ಲಿ, ಬ್ಯಾಂಕ್‌ನವರು ಜಮೀನನ್ನು ಹರಾಜು ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಈ ಕೃತ್ಯಕ್ಕೆ ಮುಂದಾಗಿದ್ದಾರೆ.