Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶಾಕ್ತ ಪರಂಪರೆ ಮಹಾಪ್ರಬಂಧ: ಕೆ.ಯು.ಶ್ರೀಧರಮೂರ್ತಿಗೆ ಡಾಕ್ಟರೇಟ್.!

 

ಚಿತ್ರದುರ್ಗ: ಶಾಕ್ತ ಪರಂಪರೆ ಕುರಿತು ಚಿತ್ರದುರ್ಗ ತಾಲ್ಲೂಕು ಭರಮಸಾಗರ ಗ್ರಾಮದ ಕೆ.ಯು.ಶ್ರೀಧರಮೂರ್ತಿ ಅವರ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.

ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಗಂಗಾಧರ ದೈವಜ್ಞ ಅವರ ಮಾರ್ಗದರ್ಶನದಲ್ಲಿ ಕೆ.ಯು.ಶ್ರೀಧರಮೂರ್ತಿ ಆಳವಾದ ಸಂಶೋಧನೆ ನಡೆಸಿ “ಪ್ರಾಚೀನ ಕರ್ನಾಟಕದಲ್ಲಿ ಶಾಕ್ತ ಪರಂಪರೆ” ಎನ್ನುವ ಶೀರ್ಷಿಕೆ ಅಡಿ ಮಹಾಪ್ರಬಂಧ ರಚಿಸಿ, ವಿಶ್ವ ವಿದ್ಯಾಲಯದ ಶಾಸನಶಾಸ್ತ್ರ ವಿಭಾಗಕ್ಕೆ ಸಲ್ಲಿಸಿದ್ದರು.

ಆರಂಭದಲ್ಲಿ  ಶಾಸನ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಕಲವೀರ ಮನ್ವಚಾರ್ ಮಾರ್ಗದರ್ಶನದಲ್ಲಿ ಶಾಕ್ತ ಪರಂಪರೆಯ ಬಗ್ಗೆ ಶ್ರೀಧರಮೂರ್ತಿ ಅವರು ಸಂಶೋಧನೆಯನ್ನು ಆರಂಭಿಸಿದರು. ಕೋವಿಡ್ ಸಂದರ್ಭದಲ್ಲಿ ಡಾ.ಕಲವೀರ ಮನ್ವಚಾರ್ ಮರಣಿಸಿದ್ದರಿಂದ, ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಗಂಗಾಧರ ದೈವಜ್ಞ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮುಂದುವರಿಸಿದರು. ಪ್ರಸ್ತುತ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅಮರೇಶ್ ಯತಗಲ್ ಅವರು ಸಂಶೋಧನಗೆ ಸೂಕ್ತ ಸಲಹೆಗಳು ನೀಡಿ ಪೆÇ್ರೀತ್ಸಾಹಿಸಿದರು.

ಶಾಕ್ತ ಪರಂಪರೆ ಎನ್ನುವ ವಿನೂತನ ವಿಷಯ ಕುರಿತು ಸಂಶೋಧನಾ ಪ್ರಬಂಧ ರಚಿಸಲು ಮೂವರು ಪ್ರಾಧ್ಯಾಪಕರು ನೀಡಿದ ಮಾರ್ಗದರ್ಶನವನ್ನು ಕೆ.ಯು.ಶ್ರೀಧರಮೂರ್ತಿಗೆ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

ಜನವರಿ 10 ರಂದು ಜರುಗಲಿರುವ ಕನ್ನಡ ವಿಶ್ವ ವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಹಾಗೂ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್, ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಕುಲಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಅವರ ಸಮ್ಮುಖದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್,  ಕೆ.ಯು.ಶ್ರೀಧರಮೂರ್ತಿ ಅವರಿಗೆ ಪಿ.ಹೆಚ್.ಡಿ ಪದವಿಯನ್ನು  ಪ್ರಧಾನ ಮಾಡಲಿದ್ದಾರೆ.

ಶ್ರೀಧರಮೂರ್ತಿ ಅವರ ತಾಯಿ ಅಕ್ಕಮಹಾದೇವಿ ವಿ. ಎಂ. ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆ ಉಮೇಶಚಾರ್.ಕೆ.ಎಂ ಭೂಮಾಪನ ಇಲಾಖೆ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಶ್ರೀಧರಮೂರ್ತಿ ಕೆ.ಯು. ಡಾಕ್ಟರೇಟ್ ಪದವಿಗೆ ಭಾಜನರಾಗಿರುವುದಕ್ಕೆ ಪತ್ನಿ ರೂಪಾ, ತಮ್ಮ ಸುದರ್ಶನ ಹಾಗೂ ಸ್ನೇಹಿತರ ಬಳಗ ಸಂತಸ ವ್ಯಕ್ತಪಡಿಸಿದೆ.