Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶೀಘ್ರವೇ ಮಾರುಕಟ್ಟೆಗೆ ಭಾರತ್ ಅಕ್ಕಿ; ಪ್ರತಿ ಕೆ.ಜಿ.ಗೆ 29 ರೂಪಾಯಿ

ನವದೆಹಲಿ: ಬೆಲೆ ಏರಿಕೆಗೆ ಕಡಿವಾಣ ಹಾಕುವುದಕ್ಕೆ ಸರ್ಕಾರ ರೀಟೇಲ್ ಮಳಿಗೆಗಳ ಮೂಲಕ ಸಬ್ಸಿಡಿ ದರದಲ್ಲಿ ಧಾನ್ಯಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. 

ರೀಟೆಲ್ ಮಳಿಗೆಗಳ ಮೂಲಕ 29 ರೂಪಾಯಿಗಳಿಗೆ 1 ಕೆ.ಜಿ ಅಕ್ಕಿ ಮಾರಾಟ ಮಾಡುವ ನಿರ್ಧಾರವನ್ನು ಮುಂದಿನ ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಮುಂದಿನ ಕೆಲವೇ ವಾರಗಳಲ್ಲಿ ಮಾರುಕಟ್ಟೆಯಲ್ಲಿ ಭಾರತ್ ಅಕ್ಕಿ (Bharat rice) ಪ್ರತಿ ಕೆ.ಜಿಗೆ 29 ರೂಪಾಯಿಗಳಿಗೆ ಲಭ್ಯವಾಗಲಿದೆ.

ನಿರ್ದಿಷ್ಟ ರಫ್ತು ಹಾಗೂ ಎಫ್ ಸಿಐ ನಿಂದ ಮುಕ್ತ ಮಾರುಕಟ್ಟೆ ಮಾರಾಟಕ್ಕೆ ಕಡಿವಾಣ ಹಾಕಿದ ನಂತರವೂ ಬಹುಮಂದಿ ಉಪಯೋಗಿಸುವ ಅಕ್ಕಿಯ ವೈವಿಧ್ಯಗಳ ರೀಟೆಲ್ ಬೆಲೆ ಹಾಗೆಯೇ ಉಳಿದಿದ್ದು, ಈ ಬೆಲೆಗಳನ್ನು ಕಡಿಮೆ ಮಾಡುವುದು ಈ ಕ್ರಮದ ಉದ್ದೇಶವಾಗಿದೆ.

ಅಕ್ಕಿ ಬೆಲೆ ಏರಿಕೆಯಾಗುತ್ತಿರುವ ಸಮಸ್ಯೆ ಕಳವಳಕಾರಿಯಾಗಿ, ಆಶಾದಾಯಕವಾಗಿ ಭಾರತ್ ಅಕ್ಕಿ ಉಪಕ್ರಮ ಬೆಲೆಗಳನ್ನು ತಗ್ಗಿಸುವಲ್ಲಿ ಸ್ವಲ್ಪಮಟ್ಟಿಗೆ ಪರಿಣಾಮ ಬೀರಬಹುದು” ಎಂದು ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾಖಲೆಯ ಉತ್ಪಾದನೆ, ಎಫ್‌ಸಿಐನೊಂದಿಗೆ ಸಾಕಷ್ಟು ದಾಸ್ತಾನುಗಳು ಮತ್ತು ಧಾನ್ಯ ರಫ್ತಿನ ಮೇಲೆ ವಿಧಿಸಲಾದ ವಿವಿಧ ನಿರ್ಬಂಧಗಳು ಮತ್ತು ಸುಂಕಗಳ ಹೊರತಾಗಿಯೂ ಅಕ್ಕಿಯ ದೇಶೀಯ ಬೆಲೆಗಳು ಏರುಗತಿಯಲ್ಲಿದೆ ಎಂದು ಅಧಿಕಾರಿ ಹೇಳಿದರು.

ಪ್ರಸ್ತುತ, ಭಾರತ್ ಬೇಳೆ ಮತ್ತು ಭಾರತ್ ಹಿಟ್ಟು ಉಪಕ್ರಮಗಳ ಅಡಿಯಲ್ಲಿ ಸರ್ಕಾರ ಚನಾ ದಾಲ್ ಮತ್ತು ಹಿಟ್ಟು ನ್ನು ಅನುಕ್ರಮವಾಗಿ ರೂ 60/ಕೆಜಿ ಮತ್ತು ರೂ 27.5/ಕೆಜಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಎಫ್‌ಸಿಐ ಇದುವರೆಗೆ ತನ್ನ ಹೆಚ್ಚುವರಿ ಸ್ಟಾಕ್‌ನಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ 7 ಮಿಲಿಯನ್ ಟನ್ (MT) ಗೋಧಿಯನ್ನು ಬೃಹತ್ ಖರೀದಿದಾರರಿಗೆ ಮಾರಾಟ ಮಾಡಿದೆ.