Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಲಿಂಗ ವಿವಾಹ ಮಾನ್ಯತೆ ನಿರಾಕರಣೆ – ಅರ್ಜಿ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ನವದೆಹಲಿ: ಸಲಿಂಗ ವಿವಾಹಕ್ಕೆ (same-sex marriage) ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್​​​ ನಿರಾಕರಿಸಿರುವ ತೀರ್ಪು ಅನ್ನು ಮತ್ತೆ ಮರುಪರಿಶೀಲನೆ ಮಾಡಬೇಕು ಎಂಬ ಅರ್ಜಿಯನ್ನು ನವೆಂಬರ್​​​​​ 28ಕ್ಕೆ ವಿಚಾರಣೆ ನಡೆಸುವುದಾಗಿ ಇಂದು ಸುಪ್ರೀಂ ಕೋರ್ಟ್​ ತಿಳಿಸಿದೆ.

ಸಲಿಂಗ ವಿವಾಹದ ಹಕ್ಕು ನಿರಾಕರಣೆ ಎಂದು ಪೀಠದಲ್ಲಿದ್ದ ಎಲ್ಲಾ ನ್ಯಾಯಾಧೀಶರು ಒಪ್ಪಿಕೊಂಡರೂ ತೀರ್ಪು ನೀಡಿದ ಸಂವಿಧಾನ ಪೀಠವು ಪರಿಹಾರವನ್ನು ನಿರಾಕರಿಸಿದ್ದರಿಂದ ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ಆಲಿಸಬೇಕು ಎಂದು ರೋಹಟಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಿದ್ದಾರೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಭಾರತದ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ಮತ್ತಿಬ್ಬರು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್​ ಮಿಶ್ರಾ ಅವರ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಇನ್ನು ಈ ಹಿಂದೆ ತೀರ್ಪು ನೀಡಿದ್ದ ಪೀಠದಲ್ಲಿ ತಾರತ್ಯಾಮ ಅಥವಾ ತಪ್ಪಿದೆ. ಹಾಗೂ ಇದನ್ನು ಪರಿಹಾರ ಮಾಡಬೇಕು ಎಂದಿದ್ದಾರೆ. ಸಲಿಂಗ ವಿವಾಹದ ಬಗ್ಗೆ ಅನೇಕರಿಗೆ ಒಲವು ಇದೆ. ಇದನ್ನೇ ಅನೇಕರು ಅವಲಂಬಿಸಿದ್ದಾರೆ ಎಂದು ಮುಕುಲ್ ರೋಹಟಗಿ ಸುಪ್ರೀಂ ಕೋರ್ಟಿನ ಮುಂದೆ ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆ ಮತ್ತೆ ಮರುಪರಿಶೀಲನೆ ಮಾಡಿ ವಿಚಾರಣೆ ನಡೆಸಬೇಕು ಎಂದು ಹೇಳಿದ್ದಾರೆ.