Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಲ್ಮಾನ್‌ ಖಾನ್‌ ಫಾರ್ಮ್‌ ಹೌಸ್‌ಗೆ ನುಗ್ಗಲು ಯತ್ನಿ – ಇಬ್ಬರ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈ ಸಮೀಪದ ಪನ್ವೇಲ್‌ನಲ್ಲಿರುವ ನಟ ಸಲ್ಮಾನ್‌ ಖಾನ್‌ ಅವರ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನಿಸಿದ ಇಬ್ಬರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.

ಅಜೇಶ್ ಕುಮಾರ್ ಮತ್ತು ಗುರುಸೇವಕ್ ಸಿಂಗ್ ಬಂಧಿತರು.

ಅರ್ಪಿತಾ ಫಾರ್ಮ್‌ಹೌಸ್‌ನಲ್ಲಿರುವ ಭದ್ರತಾ ಸಿಬ್ಬಂದಿಯ ಬಳಿ ನಾವು ಸಲ್ಮಾನ್‌ ಖಾನ್‌ ಅವರ ಅಭಿಮಾನಿ, ಅವರನ್ನು ಭೇಟಿ ಆಗಬೇಕೆಂದಿದ್ದಾರೆ.

ಆ ಬಳಿಕ ಕಂಪೌಂಡ್ ಮೇಲೆ ಹಾರಲು ಯತ್ನಿಸಿ, ಕಂಪೌಂಡ್‌ ಮೇಲಿನ ತಂತಿಯನ್ನು ತೆಗೆಲು ಯತ್ನಿಸಿ, ಫಾರ್ಮ್‌ ಹೌಸ್‌ ಪ್ರವೇಶಿಸಲು ಹೊರಟಿದ್ದಾರೆ.

ಇನ್ನು ಸಲ್ಮಾನ್‌ ಅವರ ಚಟುವಟಿಕೆಗಳ ಬಗ್ಗೆ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದಾಗ ಅವರು ಪೊಲೀಸರಿಗೆ ಕರೆ ಮಾಡಿ ಬಳಿಕ ಆರೋಪಿಗಳನ್ನು ಹಿಡಿದು ಪೊಲೀಸ್ ತಂಡಕ್ಕೆ ಒಪ್ಪಿಸಲಾಗಿದೆ.