Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಹೇಳಿಕೆ, ಕಾಮೆಂಟ್ಸ್ ಹಾಕಿದ್ರೆ ಪ್ರಕರಣ ದಾಖಲು-ದ.ಕ.ಜಿ.ಎಸ್ಪಿ ರಿಷ್ಯಂತ್‌ ಖಡಕ್‌ ಎಚ್ಚರಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚುತ್ತಿರುವ ಫೇಕ್ ನ್ಯೂಸ್, ಪ್ರಚೋದನಾಕಾರಿ ಭಾಷಣ, ಕಾಮೆಂಟ್ಸ್ ಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಯಾವುದೇ ಕೋಮು ಪ್ರಚೋದನೆ ಹೇಳಿಕೆ ಭಾಷಣ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವ ಭಾಷಣ, ಕಾಮೆಂಟ್ ಹಾಕಿದ್ರೆ ಸುಮೋಟೋ ಕೇಸ್ ದಾಖಲಿಸುವುದಾಗಿ ದ.ಕ.ಜಿ.ಎಸ್ಪಿ ರಿಷ್ಯಂತ್‌ ಹೇಳಿದ್ದಾರೆ. ಬೆಳ್ತಂಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿಯವರು, ಇನ್ನು ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಯಾರೇ ಪ್ರಚೋದನಾಕಾರಿ ಭಾಷಣ, ಕಾಮೆಂಟ್ ಹಾಕಿದ್ರೆ ಸುಮೋಟೋ ಕೇಸ್ ದಾಖಲಿಸುತ್ತೇವೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡಿದ್ರೆ ಗೂಂಡಾ ಆಕ್ಟ್ ನಡಿ ಕೇಸ್ ಮತ್ತು ಗಡಿಪಾರು ಮಾಡುತ್ತೇವೆ. ಕೆಲವರು ತಮಾಷೆಗೆ ಮಾಡಿದೆ ಅಂತಾರೆ, ಅಂತವರು ಅವರಿಂದ ಅವರಿಗೆ ಮೆಸೇಜ್ ಕಳುಹಿಸಲಿ ಸಾಮಾಜಿಕ ಜಾಲ ತಾಣದಲ್ಲಿ ಕಾಮೆಂಟ್ ಮಾಡಬಾರದು ಎಂದು ಎಚ್ಚರಿಸಿದರು. ಸಾಮಾಜಿಕ ಜಾಲ ತಾಣದಲ್ಲಿ ಬರೆಯುವವರು ಸರಿಯಾಗಿ ಯೋಚಿಸಿ ಬರೆಯಬೇಕು. ಗಣ್ಯ ವ್ಯಕ್ತಿ, ಚಿಕ್ಕ ವ್ಯಕ್ತಿ ಅಂತ ಏನಿಲ್ಲ, ಎಲ್ಲರಿಗೂ ಒಂದೇ ನಿಯಮ. ಅದರ ಪ್ರಕಾರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿಯವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.