Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಾಮೂಹಿಕ ವಿವಾಹದಲ್ಲಿ ವಂಚನೆ: ವಧುವಿನ ವೇಷದಲ್ಲಿ ಗಂಡಸರು, ತಾನೇ ಹಾರ ಹಾಕಿಕೊಂಡ ಮದುಮಗಳು!

ಬಾಲಿಯಾ: ಉತ್ತರ ಪ್ರದೇಶ ಸರ್ಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರ್ಕಾರ ನೀಡುವ ಹಣಕ್ಕಾಗಿ ವಂಚನೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಸಾಮೂಹಿಕ ವಿವಾಹ ವಂಚನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 15 ಮಂದಿಯನ್ನು ಬಂಧಿಸಲಾಗಿದೆ.

ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುಮಗಳು ತನಗೆ ತಾನೇ ಹಾರ ಹಾಕಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಹಗರಣ ಬಯಲಾಗಿದೆ ಬಮದಿದೆ. ಅಲ್ಲದೇ ಕೆಲವು ಗಂಡಸರು ಮದುವೆಗೆ ವಧುವಿನಂತೆ ವೇಷ ಧರಿಸಿಕೊಂಡು ಬಂದಿದ್ದು, ತಮ್ಮ ಮುಖಗಳನ್ನು ಮರೆಮಾಚಿಕೊಂಡು ನಿಂತಿರುವ ದೃಶ್ಯಗಳ ವಿಡಿಯೋ ಕೂಡ ವೈರಲ್ ಆಗಿದೆ.

ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಜ. 25 ರಂದು ಸಮುದಾಯ ವಿವಾಹ ನಡೆದಿತ್ತು. ಇದರಲ್ಲಿ ಸುಮಾರು 568 ಜೋಡಿಗಳು ವಿವಾಹವಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ ಈ ಸಾಮೂಹಿಕ ವಿವಾಹದಲ್ಲಿ ವಧು ವರರಂತೆ ಪೋಸ್ ನೀಡಲು ಹಲವರಿಗೆ ಹಣದ ಆಮಿಷ ಒಡ್ಡಾಲಾಗಿದೆ. ಕೆಲವು ಗಂಡಸರಂತು ಹಣದಾಸೆಗೆ ವಧುವಿನಂತೆ ವೇಷದರಿಸಿದ್ದು ಕೂಡ ಕಂಡು ಬಂದಿದೆ.

ಕೆಲವು ಮೂಲಗಳ ಪ್ರಕಾರ ವಧು-ವರರಂತೆ ಪೋಸ್ ನೀಡಲು ಪುರುಷ ಮತ್ತು ಮಹಿಳೆ ಇಬ್ಬರಿಗೂ 500 ರೂ ರಿಂದ 2,000ರೂ ವರೆಗೂ ಹಣ ನೀಡಲಾಗಿದೆ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.19 ವರ್ಷದದ ಯುವಕ ರಾಜ್ ಕುಮಾರ್ ತ ಮಾತನಾಡಿ, ನನಗೆ ವರನಂತೆ ಪೋಸ್ ನೀಡಲು ಹಣ ನೀಡಲಾಗಿತ್ತು. ನಾನು ಸಾಮೂಹಿಕ ವಿವಾಹ ನೋಡಲು ಹೋಗಿದ್ದೆ. ಆದರೆ ಅವರು ನನ್ನನ್ನು ಅಲ್ಲೇ ಕೂರಿಸಿ ವರನಂತೆ ಪೋಸ್ ನೀಡಲು ಹೇಳಿ ಹಣ ನೀಡಿದರು ಎಂದು ಹೇಳಿದ್ದಾನೆ.

ಅಂದಹಾಗೆ ಈ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಕೇತ್ಕಿ ಸಿಂಗ್ ಮುಖ್ಯ ಅತಿಥಿಯಾಗಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕಾರ್ಯಕ್ರಮಕ್ಕೆ ಕೇವಲ 2 ದಿನಗಳ ಹಿಂದಷ್ಟೇ ನನಗೆ ಮಾಹಿತಿ ನೀಡಿದ್ದರು. ಆದರೆ ನಾನು ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ತಿಳಿದುಬಂತು. ಈ ಬಗ್ಗೆ ಇದೀಗ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.