Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿಎಂ ಡಿಸಿಎಂ ಕಚೇರಿಗೆ ಬಾಂಬ್ ಬೆದರಿಕೆ ಪ್ರಕರಣ – ಪ್ರತಿಷ್ಠಿತ ವೆಬ್ ಸೈಟ್ ಹ್ಯಾಕ್ ಮಾಡಿ ಬೆದರಿಕೆ

ಬೆಂಗಳೂರು: ಸಿಎಂ, ‌ಡಿಸಿಎಂ ಸೇರಿದಂತೆ ಸರ್ಕಾರದ ಮುಖ್ಯ ಇಲಾಖೆ ಕಚೇರಿಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಪ್ರಕರಣವನ್ನ ಪೊಲೀಸ್ರು ಚುರುಕುಗೊಳಿಸಿದ್ದಾರೆ. ಗಣ್ಯರನ್ನೇ ಟಾರ್ಗೆಟ್ ಮಾಡಿದ್ದ ಆಗಂತುಕ ಕುರಿತು ಸೈಬರ್ ಸೆಲ್ ಪೊಲೀಸ್ರು ಮಹತ್ವದ ಡೀಟೇಲ್ಸ್ ಕಲೆ ಹಾಕಿದ್ದಾರೆ. *GNU TAR ವೆಬ್ ಸೈಟ್ ನಿಂದ ಮೆಸೇಜ್ ಮಾಡಿರುವುದು ಬೆಳಕಿಗೆ ಬಂದಿದ್ದು, ಗೌಪ್ಯತೆಯನ್ನೇ ಪ್ರಧಾನ ಎಂದು ಸೇವೆ ಸಲ್ಲಿಸುತ್ತಿರುವ ವೆಬ್ ಸೈಟ್ ಇದಾಗಿದೆ.

 

ಅದನ್ನೆ ಕಿಡಿಗೇಡಿ ಬಂಡವಾಳ ಮಾಡಿಕೊಂಡು ಬೆದರಿಕೆ ಹಾಕಿರೋದಾಗಿ ತಿಳಿದು ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಟಾರ್ ನೆಟ್ ವರ್ಕ್ ನಿಂದ ಮಸೇಜ್ ಬಂದಿರುವ ಮಾಹಿತಿ ಸಿಕ್ಕಿದ್ದು, ಒಂದೊಳ್ಳೆ ಉದ್ದೇಶಕ್ಕೆ ಸೃಷ್ಟಿ ಮಾಡಿದ್ದ ವೆಬ್ ಸೈಟ್ ಇದಾಗಿದೆ. 1983ರಲ್ಲಿ ರಿಚರ್ಡ್ ಸ್ಟಾಲ್ ಮನ್ ಹುಟ್ಟು ಹಾಕಿದ್ದ ವೆಬ್ ಸೈಟ್‌ನ ಕಾಲ ನಂತರದಲ್ಲಿ ಅಪ್‌ಡೇಟ್ ಮಾಡಲಾಗಿತ್ತು. ಪ್ರೈವೇಸಿ ಬಗ್ಗೆ ಸಾಕಷ್ಟು ಗಮನ ಹರಿಸುವ ವೆಬ್‌ಸೈಟ್ ಇದಾಗಿದೆ‌. ಆದರೆ ಈ ವೆಬ್‌ಸೈಟ್ ಅನ್ನು ಬಳಸಿ ಕಿಡಿಗೇಡಿ ಕೃತ್ಯವೆಸಗಿದ್ದಾರೆ. ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಳಿಕ ಬಂದಿದ್ದ ಬೆದರಿಕೆ ಮೆಸೇಜ್ ಸಾಕಷ್ಟು ಸಾಮ್ಯತೆ ಹಿನ್ನಲೆ ಬೆದರಿಕೆ ಮೆಸೇಜ್‌ಗೂ ಬ್ಲಾಸ್ಟ್‌ಗೂ ಲಿಂಕ್ ಇದೆ ಎಂಬುದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂಟರ್ ಪೋಲ್‌ಗೆ ಮಾಹಿತಿ ನೀಡಿರುವ ಸಿಸಿಬಿ ಪೊಲೀಸರು ಇಂಟರ್ ಪೋಲ್ ಮುಖಾಂತರ ಮೆಸೇಜ್ ನ ಮೂಲ ಹುಡುಕಲು ಪ್ರಯತ್ನಿಸುತ್ತಿದ್ದಾರೆ‌. ಸದ್ಯ ಟಾರ್ ನಿಂದ ಬಂದ ಮೆಸೇಜ್‌ನ ಮೂಲವನ್ನ ಸಿಸಿಬಿ ಪೊಲೀಸ್ರು ಹುಡುಕುತ್ತಿದ್ದಾರೆ.