Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿಎಂ ಸಿದ್ದರಾಮಯ್ಯರನ್ನು’ಎಡಿಟಿಂಗ್ ಮಾಸ್ಟರ್’ಎಂದು ಟೀಕಿಸಿದ ಬಿಜೆಪಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರನ್ನು “ಎಡಿಟಿಂಗ್ ಮಾಸ್ಟರ್ ” ಎಂದು ಕರೆದಿರುವ ಬಿಜೆಪಿ ಅವರ ವಿರುದ್ದ ವಾಗ್ದಾಳಿ ನಡೆಸಿದೆ.

ರಾಜ್ಯ ಬಿಜೆಪಿಯು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದು, ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಸುಳ್ಳು ಸುದ್ದಿ ಸೃಷ್ಟಿಸುವುದು, ಇವೆಲ್ಲವೂ ಸಿಎಂ ಸಿದ್ದರಾಮಯ್ಯಗೆ ಚೆನ್ನಾಗಿಯೇ ‘ಸಿದ್ದಿ’ಸಿದೆ. ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಾ ಸಮಯ ವ್ಯರ್ಥ ಮಾಡುವ ಬದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಅವರು ಯೋಚನೆ ಮಾಡಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿರಲಿಲ್ಲ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದೆ.

ಎಲ್ಲೆಂದರಲ್ಲಿ ನಿದ್ದೆಗೆ ಜಾರುವುದು ನೀವೇ (ಸಿದ್ದರಾಮಯ್ಯ) ಎಂಬುದು ಪ್ರಪಂಚಕ್ಕೆ ತಿಳಿದಿರುವ ವಿಷಯ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿ ಅವರನ್ನು ಅವಹೇಳನ ಮಾಡಿದರೆ ಜನ ನಂಬುತ್ತಾರೆಂಬ ಭ್ರಮೆಯಿಂದ ಆದಷ್ಟು ಬೇಗ ಹೊರಗೆ ಬನ್ನಿ. ಸರ್ಕಾರವನ್ನು ಮೋದಿ ಮಾದರಿಯಲ್ಲಿ ಮುನ್ನಡೆಸಿ ಜನರ ಸಮಸ್ಯೆಯನ್ನು ಆದಷ್ಟು ಬಗೆಹರಿಸಿ‌ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದೆ.

ರೈತರಿಗೆ ಕೊಡುವ ಪರಿಹಾರ, ಕರ್ನಾಟಕಕ್ಕೆ ಕಾವೇರಿ ನೀರು, ಮಹಿಳೆಯರಿಗೆ ಕೊಡಬೇಕಾದ ರಕ್ಷಣೆ, ಹಿಂದೂ ದೇವಾಲಯಗಳಿಗೆ ಅನುದಾನ, ಈಡೇರಿಸಲಾಗದ ಗ್ಯಾರಂಟಿಗಳು ಇವೆಲ್ಲ ಮಜವಾದಿ ಸಿದ್ದರಾಮಯ್ಯ ಅವರು ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳೆಂದು, ಹಾಗೂ ಮೌಲ್ವಿಗಳಿಗೆ ₹10 ಸಾವಿರ ಕೋಟಿ ಕೊಡಬೇಕು, ಮತಾಂಧ ಜಿಹಾದಿಗಳನ್ನು ರಕ್ಷಣೆ ಮಾಡಬೇಕು, ಪಿಎಫ್ಐ ಗೂಂಡಾಗಳನ್ನು ಅಮಾಯಕರೆಂದು ಬಿಡಬೇಕು, ಶಾಲೆಗಳಲ್ಲಿ ಹಿಜಾಬ್ ಹಾಕಿಕೊಂಡು ಹೋಗಬಹುದು, ಗ್ಯಾಂಗ್ ರೇಪ್ ಮಾಡಿದವರನ್ನು ಹೊರ ಬಿಡಬೇಕು ಇವೆಲ್ಲ ಸಿದ್ದರಾಮಯ್ಯ ಸಾಹೇಬ್ರು ನಿದ್ದೆಯಿಂದ ತಕ್ಷಣವೇ ಎಚ್ಚರಗೊಳ್ಳುವಂತೆ ಮಾಡುವ ಅಂಶಗಳು ಎಂದಿದೆ. ಜೊತೆಗೆ ಇದೇ ಮಜವಾದಿಯ ತುಘಲಕ್ ದರ್ಬಾರ್! ಎಂದು ಬಿಜೆಪಿ ಟೀಕೆ ಮಾಡಿದೆ.