Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸುಮ್ಮನೆ ICU ಗೆ ದಾಖಲು ಮಾಡುವ ಹಾಗಿಲ್ಲ….ಮೊದಲ ಬಾರಿಗೆ ಕೇಂದ್ರ ಸರಕಾರದಿಂದ ನಿಯಮ

ನವದೆಹಲಿ : ರೋಗಿಗಳನ್ನು ತುರ್ತು ನಿಗಾ ಘಟಕ (ಐಸಿಯು)ಗೆ ಸೇರ್ಪಡೆ ಮಾಡಿಕೊಳ್ಳಲು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ದೇಶದ ಪ್ರತಿಷ್ಠಿತ 24 ವೈದ್ಯರ ಸಮಿತಿ ಈ ನಿಯಮಗಳನ್ನು ರೂಪಿಸಿದೆ.

‘ಪ್ರಜ್ಞಾಹೀನಸ್ಥಿತಿಗೆ ತಲುಪಿದ್ದರೆ, ಉಸಿರಾಟ ಯಂತ್ರ ಅಳವಡಿಸಬೇಕಾದ ಪರಿಸ್ಥಿತಿ ಇದ್ದರೆ, ಹೆಚ್ಚಿನ ನಿಗಾ ವಹಿಸಬೇಕಾದ ಸ್ಥಿತಿಗಳಲ್ಲಿ, ಶಸ್ತ್ರ ಚಿಕಿತ್ಸೆಯ ನಂತರ ಚಿಕಿತ್ಸೆಗಾಗಿ, ತೀವ್ರವಾದ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಸಮಯದಲ್ಲಿ ಐಸಿಯು ಗಳಲ್ಲಿ ಮಾತ್ರ ಅಡ್ಮಿಟ್ ಮಾಡಿಕೊಳ್ಳಬಹುದು ಎಂದು ಈ ಸಮಿತಿ ಹೇಳಿದೆ. ದೇಶದಲ್ಲಿ ಐಸಿಯು ಪರಿಮಿತ ಸಂಪನ್ಮೂಲವಾಗಿದ್ದು, ಇವು ಅತ್ಯಂತ ಅಗತ್ಯವಿರುವವರಿಗೆ ದೊರೆಯಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ’ ಎಂದು ಸಮಿತಿಯ ಸದಸ್ಯರಾದ ಡಾ.ಆ‌ರ್.ಕೆ.ಮಣಿ ಹೇಳಿದ್ದಾರೆ.
ಭಾರತದಲ್ಲಿ ಸುಮಾರು 1 ಲಕ್ಷ ಐಸಿಯು ಹಾಸಿಗೆಗಳ ಸೌಲಭ್ಯವಿದ್ದು, ಇವುಗಳಲ್ಲಿ ಬಹುಪಾಲು ಖಾಸಗಿ ಹಾಗೂ ಮಹಾನಗರ ಗಳಲ್ಲಿವೆ. ಬಡ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳುವುದು ದುಸ್ತರವಾಗಿದೆ. ಹೀಗಾಗಿಯೇ ಎಲ್ಲರಿಗೂ ಈ ಸೌಲಭ್ಯ ದೊರೆಯಬೇಕು ಎಂಬ ಕಾರಣಕ್ಕೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.