Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹರಿಹರದ ಜಿಟಿಟಿಸಿ ಸಂಸ್ಥೆಯಲ್ಲಿ ವಿವಿಧ ಕೋರ್ಸ್‍ಗಳಿಗೆ ಉದ್ಯೋಗಾಧಾರಿತ ತರಬೇತಿ

 

ದಾವಣಗೆರೆ: ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆಯಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆಯಡಿ 16 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ, ಯುವತಿಯರಿಗೆ ಶಿಷ್ಯವೇತನದೊಂದಿಗೆ ವಿವಿಧ ಕೋರ್ಸ್‍ಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐಟಿಐ, ಡಿಪೆÇ್ಲೀಮ, ಬಿ.ಇ. ಮತ್ತು ಯಾವುದೇ ಪದವಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಆಟೋಮೇಷನ್ ಕಂಟ್ರೋಲ್, ಇಂಟರ್‍ನೆಟ್ ಆಪ್ ಥಿಂಗ್ಸ್, ರಿವರ್ಸ್ ಇಂಂಜಿನಿಯರಿಂಗ್, 3ಡಿ ಪ್ರಿಂಟಿಂಗ್, ವ್ಯಾಲಿಡೇಷನ್ ಲ್ಯಾಬ್, ರಿಯಾಲಿಟಿ ಲ್ಯಾಬ್, ಪೆÇ್ರಡಕ್ಟ್ ಡಿಸೈನ್ ಅಂಡ್ ಡೆವೆಲಪ್ ಮೆಂಟ್, ಸಿ.ಎನ್.ಸಿ ಮಿಲ್ಲಿಂಗ್ ಮಷಿನ್ ಆಪರೇಟರ್. ಸಿ.ಎನ್.ಸಿ ಪೆÇ್ರೀಗ್ರಾಮಿಂಗ್, ಆಪರೇಷನ್, ಟರ್ನರ್, ಮಿಲ್ಲರ್, ಗ್ರೈಂಡರ್, ಡಿಸೈನರ್-ಮೆಕಾನಿಕಲ್, ಪೆÇ್ರಡಕ್ಷನ್ ಇಂಜಿನಿಯರ್ (ಅಂಆ-ಅಂಒ),  ಟೂಲ್ ರೂಮ್ ಮಷಿನಿóಷ್ಟ್  ಕೋರ್ಸ್‍ಗಳಿಗೆ ತರಬೇತಿ  ನೀಡಲಾಗುವುದು. ಸ್ವ ವಿವರಗಳೊಂದಿಗೆ ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ. ಕೆಐಎಡಿಬಿ, ಇಂಡಸ್ಟ್ರಿಯಲ್ ಏರಿಯಾ ಹರ್ಲಾಪುರ, ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಹರಿಹರ, ಮೊ. 90353729971, 9611025932, 8884488202 ಸಂಖ್ಯೆಗಳಿಗೆ ಸಂಪರ್ಕಿಸಲು ಪ್ರಾಂಶುಪಾಲರು ತಿಳಿಸಿದ್ದಾರೆ.