Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಲ್ಲುಜ್ಜುವಾಗ ವಸಡಿನಲ್ಲಿ ರಕ್ತ ಬರಲು ಕಾರಣ ಮತ್ತು ಪರಿಹಾರ

ವಸಡು ನಮ್ಮ ಹಲ್ಲಿನ ಸುತ್ತ ಇರುವ ದಂತಾದಾರ ಎಲುಬುಗಳ ಮೇಲ್ಪದರವನ್ನು ಮುಚ್ಚಿರುತ್ತದೆ. ಗಟ್ಟಿಯಾದ ಹಲ್ಲುಗಳ ದೃಢತೆಗೆ ಗುಲಾಬಿ ಬಣ್ಣದ ವಸಡಿನ ಸಹಕಾರ ಅತೀ ಅಗತ್ಯ. ಆರೋಗ್ಯವಂಥ ವಸಡು ನಸುಗುಲಾಬಿ ಬಣ್ಣ ಹೊಂದಿದ್ದು, ಮುಟ್ಟಿದಾಗ ಅಥವಾ ಹಲ್ಲುಜ್ಜುವಾಗ ರಕ್ತಸ್ರಾವವಾಗುವುದಿಲ್ಲ. ವಸಡಿನ ಬಣ್ಣ ಕೆಂಪಗಾಗಿ, ವಸಡಿನಲ್ಲಿ ಹಲ್ಲುಜ್ಜುವಾಗ ರಕ್ತ ಒಸರಲು ಆರಂಭವಾದಲ್ಲಿ, ಅದು ವಸಡಿನ ಅನಾರೋಗ್ಯದ ಮುಖ್ಯ ಲಕ್ಷಣ. ವಸಡಿನ ಉರಿಯೂತ, ಪೆರಿಯೋಡೊಂಟೈಟಿಸ್ ಎಂಬ ಹಲ್ಲಿನ ಸುತ್ತಲಿನ ಅಂಗಾಗಗಳ ಖಾಯಿಲೆ ಅತಿ ಮುಖ್ಯ ಕಾರಣ. ರಕ್ತಕಣಗಳ ಸಂಖ್ಯೆ ೫೦ಸಾವಿರಕ್ಕಿಂತಲೂ ಕಡಿಮೆ ಇರುವುದು.ಬಿರುಸಾದ ಬ್ರಶ್‌ನಿಂದ ಜೋರಾಗಿ ಹಲ್ಲುಜ್ಜಿದಾಗ ವಸಡಿಗೆ ಗಾಯವಾಗಿ ರಕ್ತಸ್ರಾವವಾಗಬಹುದು. ಗರ್ಭಿಣಿಯರಲ್ಲಿ ರಸದೂತಗಳ ವೈಪರೀತ್ಯದಿಂದಾಗಿ ವಸಡುಗಳು ಊದಿಕೊಂಡು ರಕ್ತ ಒಸರುವುದು ಸರ್ವೆ ಸಾಮಾನ್ಯ. ದಾಳಿಂಬೆ, ಪೇರಳೆ, ಕಿತ್ತಳೆ, ಟೊಮೆಟೊ, ಪಪ್ಪಾಯ, ಹಸಿರು ತರಕಾರಿ, ಅನಾನಸುಗಳಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ವಿಟಮಿನ್ ಕೆ ಹೆಚ್ಚು ಇರುವ ಹಸಿರು ತರಕಾರಿ, ಕ್ಯಾಬೇಜ್, ಈರುಳ್ಳಿ, ಬ್ರೊಕೋಲಿ ಸ್ಟ್ರಾಬೆರಿ ಹಣ್ಣು ಮುಂತಾದವುಗಳನ್ನು ಹೆಚ್ಚು ಸೇವಿಸಿ.ಹಲ್ಲುಜ್ಜುವ ವಿಧಾನ ಮತ್ತು ಸೂಕ್ತವಾದ ಬ್ರಶ್‌ಗಳ ಬಳಕೆ ಅತೀ ಅವಶ್ಯಕ. ಮೆದುವಾದ ಬ್ರಶ್‌ನಿಂದ ನಿಧಾನವಾಗಿ ಮೇಲೆ ಕೆಳಗೆ ಸರಿಯಾದ ಕ್ರಮದಿಂದ 2ರಿಂದ 3 ನಿಮಿಷ ಹಲ್ಲುಜ್ಜಬೇಕು. ಉಪ್ಪಿನಲ್ಲಿ ಬ್ಯಾಕ್ಟಿರಿಯಾಗಳನ್ನು ನಾಶಪಡಿಸುವ ಗುಣವಿದ್ದು, ಇದು ಆ್ಯಂಟಿ ಫಂಗಲ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಬೆರಸಿ ಗಾರ್ಗಲ್ ಮಾಡುವುದರಿಂದ ಹಲ್ಲಿಗೆ ಸಂಬಂಧಿಸಿದ ಎಲ್ಲಾ ವಿಧವಾದ ಸಮಸ್ಯೆಗಳಿಂದ ಪರಿಣಾಮಕಾರಿಯಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.