Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಸಿಮೆಣಸು ತಿನ್ನುವುದು ಒಳ್ಳೆಯದೇ…?

ಸೂಕ್ಷ್ಮ ದೇಹಿಗಳಿಗೆ ಅದರಲ್ಲೂ ಪೈಲ್ಸ್, ಗ್ಯಾಸ್‌ ಟ್ರಬಲ್ ಮೊದಲಾದ ಸಮಸ್ಯೆ ಇರುವವರಿಗೆ ಹಸಿಮೆಣಸು ತಿನ್ನಲೇ ಬಾರದೆಂಬ ಸೂಚನೆ ನೀಡಿರುತ್ತಾರೆ. ಹಾಗೆಂದ ಮಾತ್ರಕ್ಕೆ ಇದರ ಸೇವನೆಯಿಂದ ಆರೋಗ್ಯಕ್ಕೆ  ಕೆಡುಕಾಗುತ್ತದೆ ಎಂಬರ್ಥವಲ್ಲ.

ಅದನ್ನು ಹೇಗೆ ಬಳಸಬೇಕು ನೋಡೋಣ. ಹಸಿ ಮೆಣಸನ್ನು ಚಟ್ನಿಗೆ, ಸಾರು, ಸಾಂಬಾರುಗಳಿಗೆ, ಪಲ್ಯಕ್ಕೆ ಹೆಚ್ಚಾಗಿ ಬಳಸುತ್ತಾರೆ. ಕೆಲವರು ಊಟ ಅಥವಾ ರೊಟ್ಟಿಯ ಜೊತೆ ಕಚ್ಚಿ ತಿನ್ನುತ್ತಾರೆ. ಇದರಲ್ಲಿ ವಿಟಮಿನ್ ಸಿ, ಬಿ6, ಕಬ್ಬಿಣ ಮೊದಲಾದ ಪೋಷಕಾಂಶಗಳಿದ್ದು ಇದನ್ನು ಕಾಳುಗಳ ಜೊತೆ ಬೆರೆಸಿ ತಿನ್ನುವುದರಿಂದ ಜೀರ್ಣಶಕ್ತಿ ಚುರುಕುಗೊಳ್ಳುತ್ತದೆ.

ಅಜೀರ್ಣ, ಗ್ಯಾಸ್ ಸಮಸ್ಯೆ, ಮಲಬದ್ಧತೆಯಂಥ ಸಮಸ್ಯೆಗಳು ದೂರವಾಗುತ್ತವೆ. ಹಸಿ ಮೆಣಸು ಬಳಸುವಾಗ ಬೀಜ ತೆಗೆದು ಬಳಸಬಾರದು. ಇದರ ಬೀಜಗಳಲ್ಲಿರುವ ಅಂಶವೊಂದು ರಕ್ತನಾಳಗಳ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಮಧುಮೇಹಿಗಳು ನಿತ್ಯ ಸೇವಿಸುವುದು ಬಹಳ ಒಳ್ಳೆಯದು. ಇದು ದೇಹದ ಕ್ಯಾಲೊರಿಗಳನ್ನೂ ಕಡಿಮೆ ಮಾಡುತ್ತದೆ. ಇದರಲ್ಲಿರುವ ಆಂಟಿ ಬಯಾಟಿಕ್ ಗುಣ ತ್ವಚೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಇದು ಕೆಟ್ಟ ಬ್ಯಾಕ್ಟೀರಿಯಾವನ್ನು ದೇಹದಿಂದ ಹೊರಹಾಕಿ ಅಲರ್ಜಿ ಮೊದಲಾದ ಸೋಂಕಿನಿಂದ ರಕ್ಷಿಸುತ್ತದೆ.