Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹುರುಳಿಕಾಳಿನಲ್ಲಿದೆ ತಿಂಗಳ ಋತುಸ್ರಾವಕ್ಕೆ ಮದ್ದು..! ಹುರುಳಿಕಾಳಿನ ಲಾಭ ಅರಿತಿದ್ದೀರಾ?

ಹೊಸ ಹೆಚ್ಚಾಗಿ ಮೂಗು ಕಟ್ಟಿ ಕೆಮ್ಮು ಇದ್ದರೆ ಹುರಳಿನ ಕಾಳಿನ ಸೂಪ್ ಅನ್ನು ಸೇವಿಸಿ ಇದರಿಂದ ಕಫಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ.

ಹುರುಳಿ ಕಾಳನ್ನು ರಾತ್ರಿ ನೀರಲ್ಲಿ ನೆನೆಸಿ ಬೆಳಗ್ಗೆ ಚೆನ್ನಾಗಿ ಬೇಯಿಸಿ ಅದಕ್ಕೆ ಸೈಂಧವ ಉಪ್ಪು ಕರಿಮೆಣಸಿನ ಪುಡಿ ಜೀರಿಗೆ ಸೇರಿಸಿ ತಿಂಡಿ ಸಮಯಕ್ಕೆ ಸೇವಿಸಿದರೆ ದೇಹದ ತೂಕ ಮತ್ತು ಬೊಜ್ಜು ಕರಗುತ್ತದೆ.

ತಿಂಗಳ ಋತುಸ್ರಾವ ಸರಿಯಾಗಿ ಆಗದಿದ್ದರೆ ಪ್ರತಿದಿನ ಹುರುಳಿಕಾಳಿನ ಸೂಪ್ ಅಥವಾ ಸಲಾಡ್ ಸೇವಿಸಿದರೆ ಋತುಸ್ರಾವ ಸರಿಯಾಗಿ ಆಗುತ್ತದೆ.

ಹುರುಳಿಕಾಳನ್ನು ನೆನೆಸಿ ಪೇಸ್ಟ್ ಮಾಡಿ ನೋವು ವಿರುವ ಸಂಧಿಗಳಿಗೆ ಲೇಪನ ಮಾಡಿದರೆ ನೋವು ಬೇಗ ಕಡಿಮೆಯಾಗುತ್ತದೆ.

 

ರಾತ್ರಿ ನೀರಿನಲ್ಲಿ ನೆನೆಸಿದ ಹುರುಳಿ ಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೇ ಹಾಗೆ ಸೇವಿಸಿದರೆ ಮಲವಿಸರ್ಜನೆ ಕೂಡ ಸುಲಭವಾಗಿರುತ್ತದೆ.

 

ಕಿಡ್ನಿಯಲ್ಲಿ ಕಲ್ಲಿದ್ದರೆ ಪ್ರತಿನಿತ್ಯ ನೆನೆಸಿ ಬೇಯಿಸಿದ ಹುರುಳಿಕಾಳನ್ನು ಸೇವಿಸಿದರೆ ಕಲ್ಲುಗಳು ಬೇಗ ನಿವಾರಣೆಯಾಗುತ್ತದೆ.

ಹುರುಳಿಕಾಳನ್ನು ರಾತ್ರಿ ನೀರಲ್ಲಿ ನೆನೆಸಿ ಮರುದಿನ ಆ ನೀರನ್ನು ಮೂರು ಬಾರಿ ಕುಡಿದರೆ ಬಿಳಿಸ್ರಾವ ಸಮಸ್ಯೆ ಕಡಿಮೆಯಾಗುತ್ತದೆ.

ಬಿಕ್ಕಳಿಕೆ ಹೆಚ್ಚಿದರೆ ಹುರುಳಿಕಾಳನ್ನು ಸುಡುವಾಗ ಬರುವ ಹೊಗೆಯನ್ನು ಬಾಯಿಂದ ತೆಗೆದುಕೊಂಡರೆ ಬಿಕ್ಕಳಿಗೆ ಬೇಗ ನಿಲ್ಲುತ್ತದೆ.

ನೆನೆಸಿದ ಹುರುಳಿಕಾಳನ್ನು ದಿನಕ್ಕೆ ಎರಡು ಬಾರಿ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದ ಕೊಬ್ಬಿನಂಶ ಕಡಿಮೆಯಾಗುತ್ತದೆ.