Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

10ನೇ,12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.!

 

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆ (ಕೆಎಫ್‌ಡಿ)ಯ ವತಿಯಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಇದರ ಅನ್ವಯ ಅರಣ್ಯ ವೀಕ್ಷಕ (ಫಾರೆಸ್ಟ್ ವಾಚರ್) ಹುದ್ದೆಗಳಿಗೆ ನೇಮಕಾತಿ ನಡೆಯಲಿವೆ. ಆಸಕ್ತ ಅಭ್ಯರ್ಥಿಗಳು ಇಲ್ಲಿ ನೀಡಲಾದ ಮಾಹಿತಿಗಳ ಅನುಸಾರ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ: ಒಟ್ಟು 310 ಅರಣ್ಯ ವೀಕ್ಷಕ ಹುದ್ದೆಗಳಿವೆ.

ಅರ್ಹತೆಗಳು ಏನು?: ಶೈಕ್ಷಣಿಕ : ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ತೇರ್ಗಡೆಯಾಗಿರಬೇಕು.

ವಯೋಮಿತಿ: ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18, ವರ್ಷ ಆಗಿರಬೇಕಿದ್ದು, 35 ವರ್ಷದೊಳಗಿರುವ ಸಾಮಾನ್ಯ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು. 2ಎ, 2ಬಿ, 3ಎ,3ಬಿ ಹಾಗೂ ಒಬಿಸಿಗಳಿಗೆ 3 ವರ್ಷ, ಎಸ್ಸಿ,ಎಸ್ಟಿಗಳಿಗೆ 5 ವರ್ಷ ವಿನಾಯಿತಿ ನೀಡಲಾಗಿದೆ.

ಶುಲ್ಕ ಪಾವತಿ, ಅಭ್ಯರ್ಥಿ ಆಯ್ಕೆ: ಸಾಮಾನ್ಯ ಅಭ್ಯರ್ಥಿಯು 125 ರೂ. ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 45ರೂ. ನಿಗದಿಪಡಿಸಲಾಗಿದೆ. ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಕ್ಷಮತೆ ತಪಾಸಣೆ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ವೇತನ ಶ್ರೇಣಿ: ಅರಣ್ಯ ವೀಕ್ಷಕನಾಗಿ ಆಯ್ಕೆಯಾದವರಿಗೆ ಪ್ರತಿ ತಿಂಗಳು 21,400 ರೂ.ನಿಂದ 42,000 ರೂ. ವೇತನ ನೀಡಲಾಗುತ್ತದೆ. 26.10.2023: ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಈ ವೆಬ್ ಗೆ ಹೋಗಿ ಅರ್ಜಿ ಹಾಕಿ.! https://kfdrecruitment.in/