ಇವಾಗೆಲ್ಲ 25 ವರ್ಷಕ್ಕೇ ಮುದುಕರ ತರಹ ಆಡೋ ಯುವಕರು ಈ ಸುದ್ದಿ ಓದಿದ್ರೆ ನಾಚಿಕೊಬೇಕು ಹೌದು ಇಲ್ಲೊಬ್ಬ ವ್ಯಕ್ತಿ ತನ್ನ 104 ನೇ ವಯಸ್ಸಲ್ಲೂ ಚಿರಯುವಕರೂ ತಲೆತಗ್ಗಿಸುವ ಉತ್ಸಾಹದಲ್ಲಿ ಕೆಲಸಮಾಡುತ್ತಿದ್ದಾರೆ‌. ಮಂಗಳೂರಿನ ಈ ಅಜ್ಜ ಈಗ ಕರಾವಳಿ ತುಂಬ ಫೇಮಸ್ ಪರ್ಸನ್ ಆಗುತ್ತಿದ್ದು ಇದಕ್ಕೆಲ್ಲ ಏನು ಕಾರಣ ಅಂತ ನೀವು ಈ ಸುದ್ದಿ ಓದಿ. ಇವರಿಗೆ ವಯಸ್ಸು 103 ಆಗಿದ್ರು ಇವರ ಆರೋಗ್ಯಕರ ಚಟುವಟಿಕೆಯಲ್ಲಿ ಈಗಿನ ಯವಕರು ಏನು ಅಲ್ಲಾ. ಕ್ಯಾಬ್ ಚಾಲನೆಯಲ್ಲೇ ಸತತ 85 ವರ್ಷಗಳ ಸ್ವಾರ್ಥಕ ಜೀವನ ಕಂಡುಕೊಂಡಿರುವ ಮೈಕಲ್ ಡಿಸೋಜಾ ಅವರ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿಅದು 2ನೇ ಮಹಾಯುದ್ದದ ಸಮಯ. ಕಾಫಿ ತೋಟ ಒಂದರಲ್ಲಿ ಲಾರಿ ಚಾಲಕನಾಗಿದ್ದ ಮೈಕಲ್ ಡಿಸೋಜಾ, ಒಂದೊಮ್ಮೆ ಬ್ರಿಟಿಷ್ ಅಧಿಕಾರಿಗಳ ಕಣ್ಣಿಗೆ ಬಿದ್ದು ಕಾರು ಚಾಲಕನಾಗಿ ವೃತ್ತಿ ಜೀವನ ಆರಂಭಿಸಿದರು. ಅಂದಿನಿಂದ ಈ ತನಕವೂ ಕ್ಯಾಬ್ ಚಾಲನೆಯಲ್ಲೇ ಬದುಕು ಕಂಡುಕೊಂಡಿರುವ ಮೈಕಲ್ ಡಿಸೋಜಾ ಜೀವನ ಇಂದಿನ ಯುವಜನತೆಯ ಐಕಾನ್ ಎಂದ್ರೆ ತಪ್ಪಾಗಲಾರದು.ಮೂಲತಃ ಊಟಿಯವರಾದ ಮೈಕಲ್ ಡಿಸೋಜಾ ಅವರು ವೃತ್ತಿ ಬದುಕಿಗಾಗಿ ಮಂಗಳೂರಿನಲ್ಲೇ ನೆಲೆ ಕಂಡುಕೊಂಡಿದ್ದು, ಮೊದಮೊದಲು ಬ್ರಿಟಿಷ್ ಅಧಿಕಾರಿಗಳ ಕ್ಯಾಬ್ ಚಾಲಕನಾಗಿ ನಂತರ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರಿಗೂ ಕ್ಯಾಬ್ ಚಾಲಕನಾಗಿ ಕಾರ್ಯನಿರ್ವಹಿದ್ದಾರೆ.

ತದನಂತರ ಪಿಡಬ್ಲ್ಯುಡಿ ಇಲಾಖೆಯಲ್ಲೂ ಕ್ಯಾಬ್ ಚಾಲಕನಾಗಿಯೇ ನಿವೃತ್ತಿ ಹೊಂದಿದ ಮೈಕಲ್ ಡಿಸೋಜಾ, ನಿವೃತ್ತಿ ನಂತರ ಹಾಯಾಗಿ ದಿನ ಕಳೆಯದೇ ಮತ್ತದೇ ತಮ್ಮ ನೆಚ್ಚಿನ ಕಾಯಕ ಕ್ಯಾಬ್ ಚಾಲನೆಯನ್ನೇ ನೆಚ್ಚಿಕೊಂಡಿದ್ದಾರೆ.ಇವರ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, 18 ವಯಸ್ಸಿನಿಂದಲೇ ಕಾರು ಚಾಲಕನಾಗಿ ವೃತ್ತಿ ಜೀವನ ಆರಂಭಿಸಿರುವ ಮೈಕಲ್ ಡಿಸೋಜಾ ಅವರು ಪ್ರತಿ ಹಂತದಲ್ಲೂ ರಸ್ತೆ ನಿಯಮ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಒಂದೇ ಸಣ್ಣ ಅಪಘಾತ ಮಾಡಿಲ್ಲ ಎಂದ್ರೆ ನೀವು ನಂಬಲೇಬೇಕು.ಸದ್ಯ ಮಂಗಳೂರು ಮತ್ತು ಮಣಿಪಾಲ್ ನಡುವೆ ಕ್ಯಾಬ್ ಸೇವೆಗಳನ್ನು ಒದಗಿಸುವ ಮೈಕಲ್ ಡಿಸೋಜಾ, ದಿನಂಪ್ರತಿ ಬೆಳಗಿನ 4 ಗಂಟೆಗೆ ಎದ್ದು ಕ್ಯಾಬ್ ಸೇವೆಗಳನ್ನು ನೀಡುವುದಲ್ಲದೇ ಯಾರೋಬ್ಬರ ಹಂಗಿನಲ್ಲೂ ಬದುಕದೇ ತಮ್ಮ ಜೀವನ ನಡೆಸುತ್ತಿದ್ದಾರೆ. 85 ವರ್ಷಗಳ ಚಾಲನಾ ಅನುಭವದಲ್ಲಿ ಕಳೆದ ಮೂರು ತಿಂಗಳು ಹಿಂದಷ್ಟೇ ಒಂದೇ ಒಂದು ಬಾರಿ ಸೀಟ್ ಬೆಲ್ಟ್ ಧರಿಸಿಲ್ಲವೆಂದು ದಂಡ ಹಾಕಿಸಿಕೊಂಡಿದ್ದ ಮೈಕಲ್ ಡಿಸೋಜಾ, ಸುರಕ್ಷತೆಯಿಂದ ಕಾರು ಚಾಲನೆ ಮಾಡುವ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ.85 ವರ್ಷಗಳ ಚಾಲನಾ ಅನುಭವ ಹಂಚಿಕೊಂಡಿರುವ ಮೈಕಲ್ ಡಿಸೋಜಾ ಅವರು, ನನಗೆ ಸದ್ಯಕ್ಕೆ 103 ವಯಸ್ಸು, ನನಗೆ ಬಿಪಿ, ಶುಗರ್ ಅಂದ್ರೆ ಏನೆಂದು ಗೊತ್ತಿಲ್ಲಾ, ಆಹಾರ ಪದ್ದತಿ ಹಾಗೂ ಕಾರು ಚಾಲನೆಯಲ್ಲಿ ನಾನು ಕಂಡುಕೊಂಡ ಖುಷಿಯೇ ನನ್ನನ್ನು ಯಂಗ್ ಆಗಿ ಇರುವಂತೆ ಮಾಡಿದೆ’ ಎನ್ನುವುದು ವಯಸ್ಸಿನ ಗುಟ್ಟುಇನ್ನು ಕಳೆದ 10 ವರ್ಷಗಳ ಹಿಂದೆಯೇ ಪತ್ನಿಯನ್ನು ಕಳೆದುಕೊಂಡಿರುವ ಮೈಕಲ್ ಅವರು, ಇದುವರೆಗೂ ಸ್ವಂತಕ್ಕೊಂದು ಕಾರು ಹೊಂದಿಲ್ಲ. ಹೀಗಾಗಿ ಬಾಡಿಗೆ ಕಾರುಗಳನ್ನೇ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದು, 1959ರಲ್ಲಿ ರಿನಿವಲ್ ಆಗಿರುವ ಅವರ ಚಾಲನಾ ಪರವಾನಿಗೆಯು 2019ಕ್ಕೆ ಕೊನೆಗೊಳ್ಳಲಿದೆ.ಆದರೂ ಅವರಿಗೆ ಕಾರು ಚಾಲನೆಯಲ್ಲಿನ ಆಸಕ್ತಿ ಮಾತ್ರ ಅದ್ಭುತ. ತಮ್ಮ ಕಾಯಕದಲ್ಲಿ ಅವರು ಕಂಡುಕೊಂಡಿರುವ ಖುಷಿ ಇಂದಿನ ಯುವಕರಿಗೆ ಬರಲು ಸಾಧ್ಯವೇ ಇಲ್ಲ. 103ರಲ್ಲೂ 20ರ ಯುವಕರಂತೆ ಚಟುವಟಿಕೆ ಹೊಂದಿರುವ ಮೈಕಲ್ ಡಿಸೋಜಾ ನಮ್ಮೆಲ್ಲರ ಐಕಾನ್ ಅಂದ್ರೆ ತಪ್ಪಾಗಲಾರದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here