17 ರಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ .!
ದಾವಣಗೆರೆ: ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಏ.17 ರಂದು ಸಂಜೆ 4ಕ್ಕೆ ವೈಭವದಿಂದ ಜರುಗಲಿದೆ.
ಏ.15ರಂದು ಸೋಮವಾರ ಸಂಜೆ 6ಕ್ಕೆ ಗಣಪತಿ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ರಾತ್ರಿ 7.15ಕ್ಕೆ ಕಂಕಣ ಧಾರಣೆ, ಗಜೋತ್ಸವ, ಬನ್ನಿ ಪೂಜೆ ನಡೆಯಲಿವೆ. ಏ. 16ರಂದು ಸಂಜೆ 6ಕ್ಕೆ ಸರ್ಪೋತ್ಸವ ಪೂಜೆ, ಬನ್ನಿ ಪೂಜೆ ಹಾಗೂ ಗಂಗಾಪೂಜೆ ನಡೆಯಲಿವೆ. ಏ 17 ರಂದು ಬೆಳಿಗ್ಗೆ 11.15ಕ್ಕೆ ರಥಕ್ಕೆ ಕಳಸ ಪ್ರತಿಷ್ಠಾಪನೆ, ರಥಕ್ಕೆ ಅರಿಶಿನ ಸೇವೆ ಹಾಗೂ ಕುಂಕುಮ ಪೂಜೆ ನಡೆಯಲಿವೆ. ಬೆ.11-45 ಕ್ಕೆ ತಿರುಪತಿ ಮಾದರಿಯಲ್ಲಿ ಅನ್ನ ಸಂತರ್ಪಣೆ, ಸಂಜೆ 4ಕ್ಕೆ ಸ್ವಾಮಿ ರಥೋತ್ಸವ ನಡೆಯಲಿದೆ. ಏಪ್ರಿಲ್ 18 ರಂದು ಬೆಳಗ್ಗೆ ಓಕುಳಿ ಕಾರ್ಯಕ್ರಮ ಬನ್ನಿ ಪೊಜೆ ನಡೆಯಲಿದೆ ಎಂದು ಗೊಲ್ಲರಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.