Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

2023-24ನೇ ಸಾಲಿನ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಗೆ ವೇಳಾಪಟ್ಟಿ, ಮಾರ್ಗಸೂಚಿ ಪ್ರಕಟ

ಬೆಂಗಳೂರು: 2023-24ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಸೆಪ್ಟೆಂಬರ್ 5, 2023ರ ಶಿಕ್ಷಕರ ದಿನಾಚರಣೆಯಂದು ನೀಡಲಾಗುವ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದಂತ ಬಿಬಿ ಕಾವೇರಿ ಅವರು ಸುತ್ತೋಲೆ ಹೊರಡಿಸಿದ್ದಾರೆ. 2023-2024 ನೇ ಸಾಲಿನ 5ನೇ ಸೆಪ್ಟೆಂಬರ್ 2023 ರ “ಶಿಕ್ಷಕರ ದಿನಾಚರಣೆ” ಅಂಗವಾಗಿ ಜಿಲ್ಲೆಯ “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಗಾಗಿ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರನ್ನು ಅಯ್ಕೆ ಮಾಡಲು ಸುತ್ತೋಲೆಯೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯ ಕರ್ತವ್ಯಗಳ ಮಾರ್ಗಸೂಚಿಯನ್ನು ಲಗತ್ತಿಸಿದೆ. ಪ್ರತಿ ಜಿಲ್ಲೆಗೆ ನಿಗದಿ ಪಡಿಸಿರುವ ಪ್ರಶಸ್ತಿಗಳ ಸಂಖ್ಯೆ (ವಲಯವಾರು ವಿಂಗಡಿಸಿರುವ) ಹಾಗೂ ಪ್ರತಿ ಜಿಲ್ಲಾ ಪ್ರಶಸ್ತಿಗೆ ತಲಾ ರೂ.5000/- ರಂತೆ ನಗದು ಪುರಸ್ಕಾರವನ್ನು ಹಾಗೂ ಸಾದಿಲ್ವಾರು ವೆಚ್ಚವನ್ನು ‘ಅನುಬಂಧ’ ರಲ್ಲಿರುವಂತೆ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬಿಡುಗಡೆ ಮಾಡಲಾಗುವ ಮೊತ್ತದಲ್ಲಿ ಸಾದಿಲ್ವಾರು ವೆಚ್ಚ ರೂ.2000/- ಗಳನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರು ಆಯ್ಕೆ ಸಮಿತಿಯ ಖರ್ಚು-ವೆಚ್ಚಕ್ಕಾಗಿ ಉಪಯೋಗಿಸಿ ಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ. ರಾಜ್ಯದ ಎಲ್ಲಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಲ್ಲೂಕು ಮಟ್ಟದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಆಯೋಜನೆಗೆ ರೂ.20,000/- ಗಳನ್ನು ಮತ್ತು ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಜಿಲ್ಲಾ ಮಟ್ಟದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಆಯೋಜನೆಗೆ ರೂ 30,000/-ಗಳ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅದರ ವಿವರಗಳನ್ನು “ಅನುಬಂಧ-ಆ ರಲ್ಲಿ ನೀಡಲಾಗಿದೆ. ದಿನಾಂಕ: 05.09.2023 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಾರ್ಯಕ್ರಮದ ಖರ್ಚುವೆಚ್ಚದ ವಿವರಗಳ ದೃಢೀಕೃತ ಪ್ರತಿಯೊಂದಿಗೆ ವೋಚರ್‌ಗಳ ಸಹಿತ ಉಪಯೋಗಿತ ಪ್ರಮಾಣ ಪತ್ರವನ್ನು ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಭಾವ ಚಿತ್ರಗಳು, ಸಿ. ಡಿ. ಪ್ರತಿಗಳೊಂದಿಗೆ ದಿನಾಂಕ: 30.09.2023 ರ ಒಳಗಾಗಿ ನಿಧಿಗಳ ಕಛೇರಿಗೆ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.

ಚೀನಾದಲ್ಲಿ ಮಳೆರಾಯನ ಅರ್ಭಟಕ್ಕೆ ನಾಲ್ವರು ನಾಪತ್ತೆ, 15 ಮಂದಿ ಸಾವು

ಹೀಗಿದೆ ವಾರ್ಷಿಕ ವೇಳಾಪಟ್ಟಿ

ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ತಾಲ್ಲೂಕು ಹಂತದ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಅರ್ಹರಾದ ಶಿಕ್ಷಕರ ಪಟ್ಟಿಯನ್ನು ಪ್ರಸ್ತಾವನೆಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸಲು ಕೊನೆಯ ದಿನಾಂಕ 07.08.2023.  ತಾಲ್ಲೂಕು ಹಂತದಿಂದ ಬಂದ ಪ್ರಸ್ತಾವನೆಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಪರಿಶೀಲಿಸಿ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡುವುದು. ಆಯ್ಕೆಯಾದ ಪ್ರೌಢ ಶಾಲಾ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಪಟ್ಟಿಯನ್ನು ಸಂಬಂಧಿಸಿದ ಉಪನಿರ್ದೇಶಕರು (ಆಡಳಿತ) ರವರು ನಿಧಿಗಳ ಕಛೇರಿಗೆ ಕಳುಹಿಸಲು ಕೊನೆಯ ದಿನಾಂಕ 02.09.2023.

ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಶಿಕ್ಷಕರ ಆಯ್ಕೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ದಿನಾಂಕ:05.09.2023 ರಂದು ಜಿಲ್ಲಾ ಹಂತದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪಡೆದಂತಹ ಶಿಕ್ಷಕರನ್ನು ಗೌರವಿಸಲು ತಿಳಿಸಿದೆ.

ಆಯ್ಕೆ ಪ್ರಕ್ರಿಯೆಯು ಕಾಲಮಿತಿ ಪ್ರಕರಣವಾಗಿದ್ದು ವೇಳಾಪಟ್ಟಿಯಂತೆ ಮಾರ್ಗಸೂಚಿಯನ್ನು ಅನುಸರಿಸಿ ಅರ್ಹ ಮತ್ತು ಉತ್ತಮ ಶಿಕ್ಷಕರನ್ನು ಆಯ್ಕೆಮಾಡಿ, ಅವರಿಗೆ ಪ್ರಶಸ್ತಿಯನ್ನು ಜಿಲ್ಲಾ ಹಂತದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲು ತಿಳಿಸಿದೆ.