Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

3 ಬಾರಿ SSLC ಪರೀಕ್ಷೆ ಬರೆಯಲು ಅವಕಾಶ – ಉಪನ್ಯಾಸಕರ ಸಂಘದಿಂದ ವಿರೋಧ

ಬೆಂಗಳೂರು : ಕರ್ನಾಟಕ ಸರ್ಕಾರವು ಈ ಬಾರಿಯ SSLC ಪರೀಕ್ಷೆಯಲ್ಲಿ ಒಂದು ಬಾರಿ ಅನುತ್ತೀರ್ಣರಾದರೆ ಮತ್ತೊಮ್ಮೆ ಹೀಗೆ 3 ಬಾರಿ ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ಕಲ್ಪಿಸಿತ್ತು. ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ನ.23, ಡಿ.1 ರಂದು ಪ್ರತಿಭಟನೆಗೆ ನಡೆಸುವುದಾಗಿ ಪಿಯು ಪ್ರಾಂಶುಪಾಲರು, ಉಪನ್ಯಾಸಕರ ಸಂಘದಿಂದ ಪ್ರತಿಭಟನೆ ನಡೆಸುವುದಾಗಿ ಸಭೆಯಲ್ಲಿ ನಿರ್ಧಾರವನ್ನು ಮಾಡಲಾಗಿದೆ.

3 ಪ್ರರೀಕ್ಷೆ ನಡೆಸದಂತೆ ಹಾಗೂ ತಮ್ಮ ವಿವಿಧ ಬೇಡಿಕೆಗಳನ್ನು ಇಟ್ಟಿದ್ದು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ.23ರಂದು ಆಯಾ ಜಿಲ್ಲಾ ಹಂತದಲ್ಲಿ ಕಪ್ಪುಪಟ್ಟಿ ಧರಿಸಿ, ಮೆರವಣಿಗೆ ನಡೆಸಲಾಗುವುದು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು, ಡಿ.1 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಬುಧವಾರ ನಡೆದ ಮೂರು ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ಸರ್ಕಾರದ ಇಂತಹ ಆದೇಶಗಳನ್ನು ವಿರೋಧಿಸುವ ನಿರ್ಣಯ ಕೈಗೊಳ್ಳಲಾಯಿತು. ಪ್ರಾಂಶುಪಾಲರ ಸಂಘದ ಅಧ್ಯಕ್ಷರೂ ಆದ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಮಂಡಿಸಿದ ನಿರ್ಣಯಗಳಿಗೆ ಎಲ್ಲ ಪದಾಧಿಕಾರಿಗಳು ಒಪ್ಪಿಗೆಯನ್ನು ನೀಡಿದರು.

ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್, ಗೌರವಾಧ್ಯಕ್ಷ ತಿಮ್ಮಯ್ಯಪುರ್ಲೆ, ಮೂರು ಸಂಘಟನೆಗಳ ಮುಖಂಡರಾದ ರಾಜಗೋಪಾಲ್‌, ನಾಗಣ್ಣ, ಪ್ರವೀಣ್‌ ಮಹಿಷಿ, ಉಪನ್ಯಾಸಕರ ಸಂಘದ ಜಯಣ್ಣ, ಎಸ್.ಆರ್.ವೆಂಕಟೇಶ್, ಬೋಧಕೇತರ ಸಂಘಟನೆಯ ಅಧ್ಯಕ್ಷರಾದ ನಂದೀಶ್‌ ಕುಮಾರ್, ಮಧುಸೂದನ್‌ ಮತ್ತಿತರರು ಭಾಗವಹಿಸಿದ್ದರು.