ವಿರಾಟ್ ಎಂಬ ರನ್ ಮೆಷಿನ್ ಆಗ್ತಾರಾ ಕ್ರಿಕೆಟ್ ನ ಮತ್ತೊಬ್ಬ ಸಚಿನ್.?!?

ವಿರಾಠ್ ಕೊಹ್ಲಿ ಎಂಬ ‌ರಾಕ್ಷಸ. ಪ್ರತಿ ಪಂದ್ಯಗಳಲ್ಲಿ ದಾಖಲೆಗಳ ಅಟ್ಟಹಾಸ.!!!

 

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಎಂಬ ದೈತ್ಯ ಬ್ಯಾಟ್ಸ್‌ಮನ್ ದಾಖಲೆಗಳನ್ನು ಮುರಿಯಬಲ್ಲ ಏಕೈಕ ಕ್ರಿಕೆಟರ್ ಎಂದರೆ ಅದು ಕೊಹ್ಲಿ ಎಂದರೆ ತಪ್ಪಾಗುವುದಿಲ್ಲ..

ನಾಯಕನಾಗಿ ಟೆಸ್ಟಪಂದ್ಯಗಳಲ್ಲಿ ಅತ್ಯಧಿಕ ದ್ವಿಶತಕ ದಾಖಲಿಸಿದ ಹೆಗ್ಗಳಿಕೆಗೆ ವಿರಾಠ್ ಪಾತ್ರವಾಗಿದ್ದು ಈ ಹಿದೆ ಭಾರತೀಯ ಬ್ಯಾಟ್ಸ್‌ಮನ್‌ಗಳಾದ ಸಚಿನ್ ,ಸೆಹ್ವಾಗ್ ಮತ್ತು ದ್ರಾವಿಡ್ ಗಳಿಸಿದ್ದ ಆರು ದ್ವಿಶತಕ ಸಾಧನೆಯನ್ನು ಸರಿಗಟ್ಟಿದ್ದಾರೆ

ಹೌದು ಕ್ರಿಕೆಟ್ ದೇವರು ಸಚಿನ್ ನಂತರ ಇಡೀ ಕ್ರಿಕೆಟ್‌ ಲೋಕದಲ್ಲಿ ಬಿರುಗಾಳಿ ಎಬ್ಬಿಸಿರುವುದು ಇದೇ ವಿರಾಠ್.‌.!
ಬಿರುಗಾಳಿಯ ವೇಗದಲ್ಲೇ ವಿರಾಠ್ ಕೊಹ್ಲಿ ಶತಕಗಳು ದಾಖಲೆಯತ್ತ ದಾಪುಗಾಲಾಕಿದ್ದು ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ ರನ್ ಗಳಿಸಿ ಹೊಸ ಇತಿಹಾಸ ಸೃಷ್ಟಿಸಿವೆ.!

ಏಕದಿನ ಪಂದ್ಯಗಳಲ್ಲಿ ಬರೋಬ್ಬರಿ 33 ಶತಕ ಸಿಡಿಸಿರುವ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 18 ಶತಕ ಬಾರಿಸಿದ್ದಾರೆ.
ಒಂದು ದಿ‌ನದ ಪಂದ್ಯಗಳಲ್ಲಿ ಅತಿ ವೇಗವಾಗಿ 30 ಶತಕ ಬಾರಿಸಿದ ಖ್ಯಾತಿಗೆ ವಿರಾಠ್ ಕೊಹ್ಲಿ ಪಾತ್ರರಾಗಿದ್ದಾರೆ.!

ಶತಕಗಳ ಸರದಾರ ಸಚಿನ್ ದಾಖಲೆಯತ್ತ ವಿರಾಠ್ ಕೊಹ್ಲಿ ಸಲೀಸಾಗಿ ಹೆಜ್ಜೆ ಹಾಕಿದ್ದು ಮುಂದಿನ ದಿನಗಳಲ್ಲಿ ಕೊಹ್ಲಿ ಫಾರಂ ಯಾವ ತರಹ ಇರಲಿದೆ ಕಾದುನೋಡಬೇಕು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here