Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

5ನೇ ಗ್ಯಾರೆಂಟಿ ನೋಂದಣಿ ಪ್ರಕ್ರಿಯೆಗೆ ಇಂದು ಚಾಲನೆ

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಐದನೇ ಗ್ಯಾರಂಟಿ ಯೋಜನೆ ‘ಯುವ ನಿಧಿ’ಗೆ ಇಂದು ಚಾಲನೆ ದೊರಕಲಿದೆ. ಈ ಗ್ಯಾರೆಂಟಿ ಯೋಜನೆಗೆ ’ಯುವನಿಧಿ’ ಗ್ಯಾರೆಂಟಿ ಯೋಜನೆ ಅಡಿ ನೋಂದಣಿ ಪ್ರಕ್ರಿಯೆಗೆ ಇಂದು ಸಿಎಂ ಸಿದ್ಧರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

ಜನವರಿ 12 ವಿವೇಕಾನಂದ ಜಯಂತಿಯಂದು ರಾಜ್ಯದ ಪದವೀಧರರು ಹಾಗೂ ಡಿಪ್ಲೊಮಾ ಕೋರ್ಸ್ ಮುಗಿಸಿದ ಯುವಕರ ಖಾತೆಗೆ ಸರ್ಕಾರದ ’ಯುವನಿಧಿ’ ಯೋಜನೆ ಅಡಿ ನಿರುದ್ಯೋಗ ಭತ್ತೆ ಜಮೆ ಆಗಲಿದೆ.

ಅರ್ಹ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆ ಮೊತ್ತ ಡಿಬಿಟಿ ಮೂಲಕ ವರ್ಗಾವಣೆಯಾಗಲಿದೆ. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪದವೀಧರರಾದವರಿಗೆ ಮಾಸಿಕ 3000 ರೂ., ಡಿಪ್ಲೊಮಾ ಕೋರ್ಸ್ ನಲ್ಲಿ ಉತ್ತೀರ್ಣರಾದವರಿಗೆ 1,500 ರೂ. ನಿರುದ್ಯೋಗ ಭತ್ಯೆ ಸಿಗಲಿದೆ. ಇನ್ನು ಈ ಯೋಜನೆಯ ಲಾಭವನ್ನು 5.29 ಲಕ್ಷ ಫಲಾನುಭವಿಗಳು ಪಡೆಯುವ ನಿರೀಕ್ಷೆ ಇದೆ.