Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

5 ವರ್ಷದ ಮಗು ನೀರಿನ ಸಂಪ್‌ಗೆ ಬಿದ್ದು ಮೃತ್ಯು

ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಮಗು ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿರುವ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಗಲಗುಂಟೆಯ ಸೈಯದ್‌ ಹುಸೇನ್‌ ಪುತ್ರಿ ಸಾಯಿದಾ(5) ಮೃತ ಮಗು. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮನೆ ಎದುರು ಆಟವಾಡುವಾಗ ಬಾಗಿಲು ತೆರೆದಿದ್ದ ಸಂಪ್‌ಗೆ ಬಿದ್ದು ನೀರಿನಲ್ಲಿ ಮುಳುಗಿ ಅಸ್ವಸ್ಥವಾಗಿತ್ತು. ಕೂಡಲೇ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಿಸದೆ ತಡರಾತ್ರಿ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರದುರ್ಗ ಮೂಲದ ಸೈಯದ್‌ ಹುಸೇನ್‌ ದಂಪತಿಗೆ ನಾಲ್ವರು ಮಕ್ಕಳು. ಈ ಪೈಕಿ ಮೃತ ಸಾಯಿದಾ ನಾಲ್ಕನೇ ಮಗು. ಗಾರೆ ಕೆಲಸ ಮಾಡುವ ಸೈಯದ್‌ ಕೆಲ ವರ್ಷಗಳಿಂದ ಕುಟುಂಬದ ಜತೆ ಬಾಗಲಗುಂಟೆಯಲ್ಲಿ ವಾಸವಾಗಿದ್ದಾರೆ.

ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕುಟುಂಬದ ಸದಸ್ಯರು ಮನೆಯಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಮಗು ಸಾಯಿದಾ ಆಟವಾಡಲು ಮನೆಯಿಂದ ಹೊರಗೆ ಬಂದಿದ್ದಾಳೆ. ಈ ವೇಳೆ ಮನೆ ಎದುರಿನ ಸಂಪ್‌ ಬಾಗಿಲು ತೆರೆದಿದ್ದು, ಸಾಯಿದಾ ಅದರೊಳಗೆ ಬಿದ್ದು ನೀರಿನಲ್ಲಿ ಮುಳುಗಿದ್ದಾಳೆ.