Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

6 ಎಸೆತಕ್ಕೆ 6 ವಿಕೆಟ್ ಉಡೀಸ್! 42ರ ಹರೆಯದ ಈ ಬೌಲರ್ ಬರೆದೇಬಿಟ್ಟ ವಿಶ್ವದಾಖಲೆ

ಜುಲೈ 20 ರಿಂದ ಜಿಂಬಾಬ್ವೆಯಲ್ಲಿ ಆಫ್ರೋ T10 ಲೀಗ್ ಆರಂಭವಾಗಿದೆ. ಈ ಟೂರ್ನಿಯಲ್ಲಿ ಶುಕ್ರವಾರ ಜೋಹಾನ್ಸ್‌ಬರ್ಗ್ ಬಫಲೋಸ್ ಮತ್ತು ಬುಲವಾಯೊ ಬ್ರೇವ್ಸ್ ನಡುವೆ ಅಮೋಘ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ 42ರ ಹರೆಯದ ಆಟಗಾರನೊಬ್ಬ ಕೇವಲ 2 ಓವರ್ ಗಳಲ್ಲಿ 6 ವಿಕೆಟ್ ಕಬಳಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಟಿ10 ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಇಂಥಾ ಸಾಧನೆ ಮಾಡಲಾಗಿದೆ. ಈ ಆಟಗಾರ ಕಳೆದ ವರ್ಷವಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

42 ವರ್ಷದ ಬೌಲರ್ ವಿಶ್ವದಾಖಲೆ:

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಪ್ರಸ್ತುತ ಆಫ್ರೋ ಟಿ10 ಲೀಗ್‌ ನಲ್ಲಿ ಆಡುತ್ತಿದ್ದಾರೆ. ಜೋಬರ್ಗ್ ಬಫಲೋಸ್ ತಂಡದ ನಾಯಕ ಮೊಹಮ್ಮದ್ ಹಫೀಜ್ ಬುಲವಾಯೊ ಬ್ರೇವ್ಸ್ ವಿರುದ್ಧ ಪ್ರಬಲ ಬೌಲಿಂಗ್ ಮಾಡಿದ್ದಾರೆ. ಆಫ್ ಸ್ಪಿನ್ನರ್ ಹಫೀಜ್ 2 ಓವರ್ ಗಳಲ್ಲಿ 4 ರನ್ ನೀಡಿ 6 ವಿಕೆಟ್ ಪಡೆದಿದ್ದಾರೆ. ತಮ್ಮ ಕೋಟಾದ ಮೊದಲ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ಇದಾದ ಬಳಿಕ ಓವರ್‌ನ ಐದನೇ ಎಸೆತದಲ್ಲಿ ವಿಕೆಟ್ ಪಡೆದರು. ಆ ನಂತರ ಎರಡನೇ ಓವರ್‌ನಲ್ಲಿಯೂ 3 ವಿಕೆಟ್ ಪಡೆದರು. ಈ ಮಾದರಿಯಲ್ಲಿ 6 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು.

ಮೊಹಮ್ಮದ್ ಹಫೀಜ್‌ಗಿಂತ ಮೊದಲು ಟಿ10 ಕ್ರಿಕೆಟ್‌ ನಲ್ಲಿ ವನಿಂದು ಹಸರಂಗ, ಪ್ರವೀಣ್ ತಾಂಬೆ ಮತ್ತು ಮರ್ಚಂತ್ ಡೆಲಾಂಗೆ ತಲಾ 5 ವಿಕೆಟ್ ಕಬಳಿಸಿದ್ದ ದಾಖಲೆ ಹೊಂದಿದ್ದರು. ಆದರೆ 6 ವಿಕೆಟ್‌ಗಳ ಸಾಧನೆಯನ್ನು ಇದೇ ಮೊದಲ ಬಾರಿಗೆ ಹಫೀಜ್ ಮಾಡಿದ್ದಾರೆ. ಮೊಹಮ್ಮದ್ ಹಫೀಜ್ ತಮ್ಮ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಜೋಬರ್ಗ್ ಬಫಲೋಸ್‌ಗೆ ಜಯವನ್ನು ತಂದುಕೊಟ್ಟಿದ್ದಾರೆ.

18 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನ:

ಪಾಕಿಸ್ತಾನಕ್ಕಾಗಿ 55 ಟೆಸ್ಟ್, 218 ODI ಮತ್ತು 119 T20 ಪಂದ್ಯಗಳನ್ನು ಆಡಿದ ಆಲ್ ರೌಂಡರ್ ಮೊಹಮ್ಮದ್ ಹಫೀಜ್, 3 ಜನವರಿ 2022 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತಿ ಹೊಂದಲು ನಿರ್ಧರಿಸಿದರು. ಮೊಹಮ್ಮದ್ ಹಫೀಜ್ 2018 ರಲ್ಲಿ ಟೆಸ್ಟ್ ಕ್ರಿಕೆಟ್‌ ನಿಂದ ನಿವೃತ್ತರಾದರು. ಎಲ್ಲಾ ಮೂರು ಮಾದರಿಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ ಅವರು 3 ಏಪ್ರಿಲ್ 2003 ರಂದು ಶಾರ್ಜಾದಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ